Saturday, June 13, 2026
Homeಕರಾವಳಿಸುಳ್ಯ ; ಬೆಳ್ಳಾರೆಯಲ್ಲಿ ಅಪ್ರಾಪ್ತೆಯೊಂದಿಗೆ ಮುಸ್ಲಿಂ ಮುಖಂಡ ಅಸಭ್ಯ ವರ್ತನೆ ಆರೋಪ; ಪೋಕ್ಸೋ ಪ್ರಕರಣ ದಾಖಲು

ಸುಳ್ಯ ; ಬೆಳ್ಳಾರೆಯಲ್ಲಿ ಅಪ್ರಾಪ್ತೆಯೊಂದಿಗೆ ಮುಸ್ಲಿಂ ಮುಖಂಡ ಅಸಭ್ಯ ವರ್ತನೆ ಆರೋಪ; ಪೋಕ್ಸೋ ಪ್ರಕರಣ ದಾಖಲು

- Advertisement -
- Advertisement -

ಸುಳ್ಯ:  ಬೆಳ್ಳಾರೆಯಲ್ಲಿ ಅಪ್ರಾಪ್ತೆಯೊಂದಿಗೆ ಮುಸ್ಲಿಂ ಮುಖಂಡ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. ಅಶ್ರಫ್ ಎಂಬಾತ ಬಾಲಕಿ ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿದ್ದಾಗ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬೆಳ್ಳಾರೆಯ ಮುಸ್ಲಿಂ ಮುಖಂಡನೋರ್ವನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ.

ಅಶ್ರಫ್ ರಾತ್ರಿ ವೇಳೆ ತಾಯಿ ಮೊಬೈಲಿನಿಂದ ಕರೆ ಮಾಡಿ ಮಾತನಾಡುವಂತೆ ಒತ್ತಾಯ ಮಾಡಿದ್ದು, ಇದರಿಂದ ಭಯಗೊಂಡ ಬಾಲಕಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿರುದಾಗಿ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿನಿಯು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಆರೋಪಿಯು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ  ನೀನು ರಾತ್ರಿ ಸಮಯ ನಿನ್ನ ತಾಯಿ ಮೊಬೈಲಿನಿಂದ ಕರೆ ಮಾಡಿ ನನ್ನ ಜೊತೆ ಮಾತನಾಡಬೇಕು ಎಂಬುದಾಗಿ ತಿಳಿಸಿದ್ದಾನಂತೆ. ಈ ಬಗ್ಗೆ ಬಾಲಕಿಯು ಮನೆಗೆ ಬಂದು ವಿಚಾರ ತಿಳಿಸಿದ್ದು, ಅಲ್ಲದೇ ಬಾಲಕಿ ಹೆದರಿ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳಿದ್ದಾಳೆ. ಕೊನೆಗೆ, ಪೋಷಕರು ಮಗಳು ಮನೆಯಲ್ಲಿರುವಾಗ ಮೊಬೈಲ್ ನಿಂದ ಅಶ್ರಫ್ ಗೆ ಕರೆ ಮಾಡಿಸಿದಾಗ ಆತನು ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಆಕೆ ಹೆದರಿ ಸುಮಾರು 10 ದಿನಗಳಿಂದ ಶಾಲೆಗೆ ಹೋಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 354(D), 509 ಐಪಿಸಿ ಮತ್ತು ಕಲಂ 12 ಫೋಕ್ಸೋ ಆಕ್ಟ್ 2012 ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!