Wednesday, May 15, 2024
Homeಕರಾವಳಿವೇಣೂರು: ಭಾರೀ ವಿರೋಧದ ಹಿನ್ನೆಲೆ: ವೇಣೂರು ಬ್ರಹ್ಮಕಲಶೋತ್ಸವದಲ್ಲಿ ರೋಹಿತ್ ಚಕ್ರತೀರ್ಥರ ಉಪನ್ಯಾಸ ರದ್ದು

ವೇಣೂರು: ಭಾರೀ ವಿರೋಧದ ಹಿನ್ನೆಲೆ: ವೇಣೂರು ಬ್ರಹ್ಮಕಲಶೋತ್ಸವದಲ್ಲಿ ರೋಹಿತ್ ಚಕ್ರತೀರ್ಥರ ಉಪನ್ಯಾಸ ರದ್ದು

spot_img
- Advertisement -
- Advertisement -

ವೇಣೂರು ಬ್ರಹ್ಮಕಲಶೋತ್ಸವಕ್ಕೆ ರೋಹಿತ್  ಚಕ್ರತೀರ್ಥಗೆ ಆಹ್ವಾನ ನೀಡಿದ್ದಕ್ಕೆ ಬಿಲ್ಲವ ಸಂಘದ ನಿಯೋಗದಿಂದ  ಅಳದಂಗಡಿ ಅರಸರಾದ ಡಾ||  ಪದ್ಮ ಪ್ರಸಾದ್  ಅಜಿಲರ ಭೇಟಿ ಮಾಡಿ, ರೋಹಿತ್ ಉಪನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಇದೀಗ ರೋಹಿತ್‌ ಚಕ್ರತೀರ್ಥರನ್ನು ಆಹ್ವಾನಿಸುವ ವಿಚಾರ ಕೈ ಬಿಟ್ಟಿರುವುದಾಗಿ  ಅಳದಂಗಡಿ ಅರಸರಾದ ಡಾ||  ಪದ್ಮ ಪ್ರಸಾದ್  ಅಜಿಲರು ಬೆಳ್ತಂಗಡಿ ತಾಲೂಕು ಬಿಲ್ಲವ ಸಮುದಾಯದ ಮುಖಂಡರುಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ ವಿವಾದಿತ ರೋಹಿತ್ ಚಕ್ರತೀರ್ಥರನ್ನು ಶಿಕ್ಷಣ ಮತ್ತು ಧರ್ಮ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ಕರೆದಿರುವ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಭಗವಾನ್  ಮಹಾವೀರ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಇಣ್ಣ ರೈ ಮುಂತಾದ ದಾರ್ಶನಿಕರ  ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ಪಠ್ಯ ಪುಸ್ತಕ  ಪರಿಷ್ಕರಣೆ  ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡ ವಿಕೃತ  ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು  ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಒಕ್ಕೊರಲಿನಿಂದ ಮನವಿ ಮಾಡಲಾಗಿತು.

- Advertisement -
spot_img

Latest News

error: Content is protected !!