Sunday, June 7, 2026
Homeತಾಜಾ ಸುದ್ದಿಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕೊಳ್ತಾಳೆ: ನನ್ನ ಗಂಡನ ಹಿಂದೆ ಬಿದ್ದಿದ್ದಾಳೆ: ರೂಪಾ...

ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕೊಳ್ತಾಳೆ: ನನ್ನ ಗಂಡನ ಹಿಂದೆ ಬಿದ್ದಿದ್ದಾಳೆ: ರೂಪಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್*

- Advertisement -
- Advertisement -

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ನಡುವಿನ ವಾಕ್ಸಮರ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದು ಇಬ್ಬರನ್ನೂ ವರ್ಗಾವಣೆಗೊಳಿಸಿ ಸರ್ಕಾರ ಇಬ್ಬರಿಗೂ ಬಿಸಿ ಮುಟ್ಟಿಸಿತ್ತು. ಇದೀಗ ಈ ನಡುವೆಯೇ ರೂಪಾ ರೋಹಿಣಿ ಸಿಂಧೂರಿ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೋವೊಂದು ಲೀಕ್‌ ಆಗಿದೆ.

ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆ ಇದಾಗಿದ್ದು ಎಲ್ಲೆಡೆ ವೈರಲ್‌ ಆಗಿದೆ. ಆಡಿಯೋದಲ್ಲಿ “ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ. ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ. ಡಿ.ಕೆ. ರವಿ ವಿಷ್ಯದಲ್ಲೂ ಆಗಿದ್ದು ಹಾಗೆನೇ. ನಾವು ನೋಡಿದ್ದೀವಲ್ಲ. ಎಂಟು ವರ್ಷದಿಂದ ನೋಡ್ತಿದ್ದೀನಿ ನಾನು. ಆಯಮ್ಮ ನನ್ನ ಗಂಡನ ಹಿಂದೆ ಬಿದ್ದಿದ್ದಾಳೆ. ಅವರ ಹಿಂದೇನೆ ಬಿದ್ದಿದ್ದಾಳೆ ಅಂತಾ ವೈರಲ್ ಆಡಿಯೋದಲ್ಲಿ ರೂಪಾ ಮಾತನಾಡಿದ್ದಾರೆ.

- Advertisement -

Latest News

error: Content is protected !!