Thursday, June 4, 2026
Homeಕರಾವಳಿಸುಳ್ಯ; ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಆರೋಪ: ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಸುಳ್ಯ; ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಆರೋಪ: ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

- Advertisement -
- Advertisement -

ಸುಳ್ಯ: ಅಪ್ರಾಪ್ತ ಬಾಲಕಿಯನ್ನು ತನ್ನ ಸ್ನೇಹಿತನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ ಯುವಕನ ವಿರುದ್ಧ  ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದ ನಿವಾಸಿ ತೀರ್ಥಪ್ರಸಾದ್(25) ಆರೋಪಿ.

ಬಾಲಕಿಗೆ ಕಳೆದ 4 ತಿಂಗಳ ಹಿಂದೆ ವಾಟ್ಸಾಪ್ ಗ್ರೂಪ್‌ನಲ್ಲಿ ಉಬರಡ್ಕದ ತೀರ್ಥಪ್ರಸಾದ್ ಎಂಬಾತ ಪರಿಚಯವಾಗಿದ್ದ. ಅಲ್ಲಿಂದ ನಂತರ ಇಬ್ಬರ ನಡುವೆ ಫೋನ್ ನಲ್ಲಿ ಸಂಪರ್ಕ ಬೆಳೆದಿದೆ.  ಅದರಂತೆ  ಜೂ.30 ರಂದು ತೀರ್ಥಪ್ರಸಾದ್ ಬಾಲಕಿಗೆ ಕರೆ ಮಾಡಿ ಸುಳ್ಯಕ್ಕೆ ಬಾ ಮಾತನಾಡಲಿಕ್ಕಿದೆ ಎಂದು ಕರೆದಿದ್ದಾನೆ. ಅದರಂತೆ  ಬಾಲಕಿ ಸುಳ್ಯಕ್ಕೆ ಬಂದಾಗ  ಆಕೆಯನ್ನು ಆತನ ಬೈಕ್ ನಲ್ಲಿ ಸ್ನೇಹಿತನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಇದೀಗ ಬಾಲಕಿ ಗರ್ಭಿಣಿಯಾಗಿದ್ದು ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ.

- Advertisement -

Latest News

error: Content is protected !!