Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಪೋಕ್ಸೋ ಪ್ರಕರಣದ ಆರೋಪಿ ಜೈಲಿನ್ಲಲಿ ಆತ್ಮಹತ್ಯೆ

ಮಂಗಳೂರು: ಪೋಕ್ಸೋ ಪ್ರಕರಣದ ಆರೋಪಿ ಜೈಲಿನ್ಲಲಿ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ಪೋಕ್ಸೋ ಪ್ರಕರಣದ ಆರೋಪಿ ಜೈಲಿನ್ಲಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಪ್ರಕಾಶ್ ಗೋಪಾಲ ಮೂಲ್ಯ (50) ಆತ್ಮಹತ್ಯೆ ಶರಣಾದವನು.

ಭಾನುವಾರ ನಸುಕಿನ 4ರಿಂದ 4.50ರ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡುಬಿದ್ರೆ ಠಾಣೆಯಲ್ಲಿ ಪೋಕ್ಸೋ ಕೇಸು ದಾಖಲಾಗಿದ್ದ ಹಿನ್ನೆಲೆ ಪ್ರಕಾಶ್ ಗೋಪಾಲ ಮೂಲ್ಯ ಮಾ.11ರಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಮಂಗಳೂರು ಜೈಲು ಸೇರಿದ್ದ. ಜೈಲಿನ ಟಾಯ್ಲೆಟ್ ಒಳಗಡೆಯ ಕಿಟಕಿಗೆ ನೇಣು ಹಾಕಿದ್ದು ಕೆಲವೊತ್ತಲ್ಲಿ ಜೈಲು ಸಿಬ್ಬಂದಿ ಗಮನಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಷ್ಟರಲ್ಲಿ ಮೃತಪಟ್ಟಿದ್ದಾನೆ. ಪೋಕ್ಸೋ ಪ್ರಕರಣದಲ್ಲಿ ಜಾಮೀನು ಸಿಗೋದಿಲ್ಲ, ಯಾರು ಕೂಡ ಜೈಲಿನಿಂದ ಬಿಡಿಸಲು ಬರೋದಿಲ್ಲ ಅಂತ ಸಾವಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

ಮೂಡಬಿದ್ರೆ ಲಾಡಿಯಲ್ಲಿ ನೆಲೆಸಿದ್ದ ಪ್ರಕಾಶ್ ಬೆಳಗಾವಿ ಮೂಲದ ಕೂಲಿ ಕಾರ್ಮಿಕನಾಗಿದ್ದು ವಿಪರೀತ ಕುಡಿತದ ಚಟ ಹೊಂದಿದ್ದ. ಅಲ್ಲಿಯೇ ಪರಿಸರದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಲ್ಲದೆ, ಅದರ ವಿಡಿಯೋ ಮಾಡಿಟ್ಟು ಬ್ಲಾಕ್ಟೇಲ್ ಮಾಡುತ್ತಿದ್ದ. ಆತನ ಮೊಬೈಲ್ ನಲ್ಲಿ ವಿಡಿಯೋ ಸಿಕ್ಕಿದ್ದು ಪೊಲೀಸರು ವಶಕ್ಕೆ ಪಡೆದು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು.

ಮನೆಯಲ್ಲಿ ಪತ್ನಿಗೆ ಕುಡಿದು ಬಂದು ಹೊಡೆಯುತ್ತಿದ್ದುದರಿಂದ ಬಂಧನ ಆಗಿದ್ದರೂ ನೋಡಲು ಬಂದಿರಲಿಲ್ಲ. ಹೀಗಾಗಿ ಜಿಗುಪ್ಪೆಗೊಂಡು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಜೈಲಿನಲ್ಲಿ ಆತ್ಮಹತ್ಯೆ ಆಗಿರುವ ಬಗ್ಗೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!