Monday, June 8, 2026
Homeಉತ್ತರ ಕನ್ನಡಭಟ್ಕಳ: ತೆಂಗಿನಗುಂಡಿ ಬಂದರಿಗೆ ಸಚಿವ ಅಂಗಾರ ಭೇಟಿ

ಭಟ್ಕಳ: ತೆಂಗಿನಗುಂಡಿ ಬಂದರಿಗೆ ಸಚಿವ ಅಂಗಾರ ಭೇಟಿ

- Advertisement -
- Advertisement -

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ಭೇಟಿ ನೀಡಿದ್ದಾರೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಕುಸಿತ ಕಂಡಿದ್ದ ಬಂದರಿನ ಧಕ್ಕೆಯನ್ನು ಸಚಿವ ಅಂಗಾರ ಪರಿಶೀಲನೆ ನಡೆಸಿದ್ದಾರೆ.

ಧಕ್ಕೆ ಕುಸಿದಿರುವ ಬಗ್ಗೆ ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಸಚಿವ ಅಂಗಾರ ವರದಿ ನೀಡಲು ಸೂಚಿಸಿದ್ದಾರೆ. ಭೇಟಿ ವೇಳೆ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಸಚಿವರ ಜೊತೆಗಿದ್ದರು.

ಕುಸಿದ ಧಕ್ಕೆಯ‌ನ್ನು ಆದಷ್ಟು ಬೇಗ ದುರಸ್ತಿಗೊಳಿಸುವುದಾಗಿ ಸಚಿವ ಅಂಗಾರ ಭರವಸೆ ನೀಡಿದ್ದು, ಈ ವೇಳೆ ಸಚಿವರಿಗೆ ವಿವಿಧ ಸಮಸ್ಯೆಗಳ ಬಗ್ಗೆ ಮೀನುಗಾರರು ಮನವಿ ಸಲ್ಲಿಸಿದರು.

- Advertisement -

Latest News

error: Content is protected !!