Saturday, June 13, 2026
Homeತಾಜಾ ಸುದ್ದಿಬಂಟ್ವಾಳ: ಅಪಘಾತಕ್ಕೀಡಾಗಿದ್ದ ಗಾಯಾಳುವನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ ಪೊಲೀಸ್:‌ ಸಾರ್ವಜನಿಕರಿಂದ ಪೊಲೀಸ್‌ ಮಾನವೀಯ ಕಾರ್ಯಕ್ಕೆ...

ಬಂಟ್ವಾಳ: ಅಪಘಾತಕ್ಕೀಡಾಗಿದ್ದ ಗಾಯಾಳುವನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ ಪೊಲೀಸ್:‌ ಸಾರ್ವಜನಿಕರಿಂದ ಪೊಲೀಸ್‌ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

- Advertisement -
- Advertisement -

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಸೂರಿಕುಮೇರು ಮಸೀದಿ ಸಮೀಪ ವಾಹನವೊಂದು ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಇದೇ ದಾರಿಯಲ್ಲಿ ಸಾಗುತ್ತಿದ್ದ ಬಂಟ್ವಾಳ ಠಾಣೆಯ ಪೊಲೀಸ್ ಉದಯ್ ಎಂಬುವರು ಕೂಡಲೇ ತನ್ನ ಸ್ವಿಫ್ಟ್ ಕಾರಿನಲ್ಲಿ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ತಾನು ಧರಿಸಿದ ಪೊಲೀಸ್ ಸಮವಸ್ತ್ರ ಮತ್ತು ತನ್ನ ಕಾರು ಸಂಪೂರ್ಣ ರಕ್ತದಿಂದ ತೋಯ್ದು ಹೋಗಿದ್ದರೂ ಯಾವುದನ್ನು ಲೆಕ್ಕಿಸದೆ ಗಾಯಾಳುವಿನ ಜೀವ ಉಳಿಸಲು ಪ್ರಯತ್ನಿಸಿದ ಉದಯ್ ರವರ ಕರ್ತವ್ಯ ನಿಷ್ಠೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.

- Advertisement -

Latest News

error: Content is protected !!