Thursday, June 4, 2026
Homeಕರಾವಳಿಜೆಸ್ಕಾಂ ಸಿಬ್ಬಂದಿಯ ಗಣೇಶ ವಿಸರ್ಜನೆ ಡಿಜೆ ತಡೆದು ಕೇಸ್ ಹಾಕಿದ ಪೊಲೀಸರು; ಸಿಟ್ಟಿಗೆದ್ದು ಪೊಲೀಸ್ ಠಾಣೆಯ...

ಜೆಸ್ಕಾಂ ಸಿಬ್ಬಂದಿಯ ಗಣೇಶ ವಿಸರ್ಜನೆ ಡಿಜೆ ತಡೆದು ಕೇಸ್ ಹಾಕಿದ ಪೊಲೀಸರು; ಸಿಟ್ಟಿಗೆದ್ದು ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ

- Advertisement -
- Advertisement -

ಹೊಸಪೇಟೆ: ಗಣೇಶ ಮೂರ್ತಿ ವಿರ್ಸಜನೆ ವೇಳೆ ಪೊಲೀಸರು ಡಿಜೆ ಸೀಜ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಜೆಸ್ಕಾಂ ಸಿಬ್ಬಂದಿ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಡಾವಣೆ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಹೊಸಪೇಟೆಯ ಕೆಇಬಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜಿಸಲು ಜೆಸ್ಕಾಂ ಸಿಬ್ಬಂದಿ ಶುಕ್ರವಾರ ತಡರಾತ್ರಿ ನಿಯಮ ಮೀರಿ ಡಿಜೆ ಹಾಕಿಕೊಂಡು ಗಣೇಶ ವಿಸರ್ಜನೆಗೆ ಕುಣಿಯುತ್ತಾ ಹೋಗುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಜೆಸ್ಕಾಂ ಸಿಬ್ಬಂದಿಯನ್ನು ತಡೆದ ಪೊಲೀಸರು ಹತ್ತು ಮಂದಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದರಿಂದ ಕೋಪಗೊಂಡ ಜೆಸ್ಕಾಂ ಸಿಬ್ಬಂದಿ ಶನಿವಾರ
ಗಂಟೆಗೂ ಹೆಚ್ಚು ಕಾಲ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಶನಿವಾರ ಬೆಳಿಗ್ಗೆಯೇ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಪೊಲೀಸ್ ಸಿಬ್ಬಂದಿ ಕೆಲವು ಕಾಲ‌ ಪರದಾಡುವಂತಾಗಿತ್ತು.

ಬಳಿಕ ಮೇಲಧಿಕಾರಿಗಳ ಸಮಾಲೋಚನೆ ನಡೆದು ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಲಾಗಿದೆ.

- Advertisement -

Latest News

error: Content is protected !!