Monday, June 8, 2026
Homeತಾಜಾ ಸುದ್ದಿಕಟೀಲ್‌ ಕಾರು ಚಾಲಕನಾಗಿದ್ದ ಪ್ರವೀಣ್‌ ದೂರವಾಗಿದ್ದೇಕೆ? ಪೊಲೀಸರು ಕಟೀಲ್‌ರನ್ನೂ ವಿಚಾರಣೆಗೊಳಪಡಿಸಬೇಕು: ಸಿದ್ದರಾಮಯ್ಯ ಒತ್ತಾಯ

ಕಟೀಲ್‌ ಕಾರು ಚಾಲಕನಾಗಿದ್ದ ಪ್ರವೀಣ್‌ ದೂರವಾಗಿದ್ದೇಕೆ? ಪೊಲೀಸರು ಕಟೀಲ್‌ರನ್ನೂ ವಿಚಾರಣೆಗೊಳಪಡಿಸಬೇಕು: ಸಿದ್ದರಾಮಯ್ಯ ಒತ್ತಾಯ

- Advertisement -
- Advertisement -

ಬೆಂಗಳೂರು: ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಆತ್ಮೀಯನಾಗಿದ್ದ ಮೃತ ಪ್ರವೀಣ್‌ ನೆಟ್ಟಾರು ಒಂದಷ್ಟು ಕಾಲ ನಳಿನ್‌ ಅವರ ಕಾರಿಗೆ ಚಾಲಕನೂ ಆಗಿದ್ರಂತೆ. ಇಷ್ಟೊಂದು ಆತ್ಮೀಯರಾಗಿದ್ದವರು ದೂರವಾಗಿರುವುದು ಯಾಕೆ? ಪೊಲೀಸರು ಅವರನ್ನೂ ವಿಚಾರಣೆಗೊಳಪಡಿಸಿದರೆ ದುಷ್ಕರ್ಮಿಗಳ ಪತ್ತೆಗೆ ನೆರವಾದೀತು. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹಿಂದೂಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದುಗಳ ಮೇಲೆ ಸಂಶಯ ಪಡುವುದು ಸಾಮಾನ್ಯವಾಗಿಬಿಟ್ಟಿದೆ. ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿ ಹೋಗುತ್ತಿದೆ. ಹತ್ಯೆ ನಡೆಸಿರುವ ದುರ್ಷ್ಕಮಿಗಳು ಯಾವುದೇ ಜಾತಿ, ಧರ್ಮ, ಇಲ್ಲವೇ ಸಂಘಟನೆಗಳಿಗೆ ಸೇರಿದ್ದರೂ ಮುಲಾಜಿಲ್ಲದೆ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!