- Advertisement -


- Advertisement -
ಮಂಗಳೂರು : ದಕ್ಷಿಣಕನ್ನಡ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ಹಾಗೂ ಎಸ್‌ಎಎಫ್ (ಸ್ಪೆಷಲ್ ಆಕ್ಷನ್ ಫೋರ್ಸ್) ತಂಡ ದಾಳಿ ನಡೆಸಿದೆ.
ಜು.10ರಂದು ರಮ್‌ಸೋನಾ ಎಂಬಾಕೆಯು ಬೇಕರಿ ತಿಂಡಿಗಳ ಪ್ಯಾಕೆಟ್‌ನಲ್ಲಿ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ 5 ಸಣ್ಣ ಪೊಟ್ಟಣಗಳನ್ನು ವಿಚಾರಣಾಧೀನ ಕೈದಿ ಮುಹಮ್ಮದ್ ಅಸ್ಕರ್ ಎಂಬಾತನಿಗೆ ನೀಡಲು ತಂದಿದ್ದಳು ಎನ್ನಲಾಗಿದೆ. ಜೈಲಿನ ಸಿಬ್ಬಂದಿ ತಿಂಡಿಯ ಪ್ಯಾಕೆಟ್‌ಗಳನ್ನು ಪರಿಶೀಲನೆ ನಡೆಸುವಾಗ ಮಾದಕ ವಸ್ತುಗಳ ಪ್ಯಾಕೆಟ್‌ಗಳು ಪತ್ತೆಯಾಗಿದ್ದವು. ಮಹಿಳೆಯ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಆಕೆಯನ್ನು ಬಂಧಿಸಲಾಗಿದೆ.
ಜೈಲಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಜೈಲಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
- Advertisement -


