Wednesday, May 8, 2024
Homeಚಿಕ್ಕಮಗಳೂರುಕಾಫಿನಾಡಿನಲ್ಲಿ ಕೂಲ್ ಕೂಲ್ ವೆದರ್ ಗೆ ಬಿಸಿ ಬಿಸಿ ಮಟನ್ ಬಿರಿಯಾನಿ ಸವಿಯೋಕೆ ಹೋಗೋ ಪ್ರವಾಸಿಗರು...

ಕಾಫಿನಾಡಿನಲ್ಲಿ ಕೂಲ್ ಕೂಲ್ ವೆದರ್ ಗೆ ಬಿಸಿ ಬಿಸಿ ಮಟನ್ ಬಿರಿಯಾನಿ ಸವಿಯೋಕೆ ಹೋಗೋ ಪ್ರವಾಸಿಗರು ಈ ಸುದ್ದಿ ಓದಿ; ಮಟನ್ ಬಿರಿಯಾನಿ ಹೆಸರಲ್ಲಿ ಇಲ್ಲಿ ಹೇಗೆ ಯಾಮಾರಿಸ್ತಾರೆ ನೋಡಿ..

spot_img
- Advertisement -
- Advertisement -

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕೂಲ್ ಕೂಲ್ ವೆದರ್ ಗೆ ಬಿಸಿ ಬಿಸಿ ಮಟನ್ ಬಿರಿಯಾನಿ ಸವಿಯೋಕೆ ಹೋಗೋ ಪ್ರವಾಸಿಗರು ಈ ಸುದ್ದಿ ತಪ್ಪದೇ ಓದಲೇ ಬೇಕು.  ಮಟನ್ ಬಿರಿಯಾನಿ ಹೆಸರಲ್ಲಿ ಅಮಾಯಕರನ್ನು  ಇಲ್ಲಿ ಚೆನ್ನಾಗಿಯೇ ಯಾಮಾರಿಸ್ತಾರೆ.ಹೋಟೆಲ್ ಗಳ ಮೇಲೆ ಪೊಲೀಸರು ದಾಳಿ ಮಾಡಿದಾಗ  ನಿಜ ಬಣ್ಣ ಬಯಲಾಗಿದೆ. ಕುರಿ ಮಾಂಸದ ಬಿರಿಯಾನಿ ಬದಲು ಗೋ ಮಾಂಸದ ಬಿರಿಯಾನಿ ನೀಡುತ್ತಿರೋದು ಗೊತ್ತಾಗಿದೆ.

ಕುರಿ ಮಟನ್ ಕೆ.ಜಿ.ಗೆ 700-800 ರೂಪಾಯಿ. ಆದ್ರೆ, ದನದ ಮಟನ್ 200-300 ರೂಪಾಯಿಗೆ ಸಿಗುತ್ತೆ. ಹಾಗಾಗಿ, ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಕ್ಸ್ ಮಾಡಿ ಅಡುಗೆ ಮಾಡಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ ಐದು ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ.

ಯಾವಾಗ ಹೋಟೆಲ್‍ನಲ್ಲಿ ದನದ ಮಾಂಸ ಬಳಸುತ್ತಾರೆ ಎಂದು ಗೊತ್ತಾಯ್ತೋ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ, ಜಿಲ್ಲೆಗೆ ಬರುವ ಲಕ್ಷಾಂತರ ಪ್ರವಾಸಿಗರು ಕೂಡ ಜಿಲ್ಲೆಯ ಸೌಂದರ್ಯದಷ್ಟೆ ಇಲ್ಲಿನ ಊಟವನ್ನೂ ಲೈಕ್ ಮಾಡುತ್ತಾರೆ. ಆ ರೀತಿ ನಾನ್ ವೆಜ್ ಪ್ರಿಯರನ್ನೆ ಬಂಡವಾಳ ಮಾಡಿಕೊಂಡು ಹೋಟೆಲ್ ಮಾಲೀಕರು ದಂಧೆ ಮಾಡುತ್ತಿದ್ದಾರೆ. ಆದರೆ, ಹೋಟೆಲ್ ಮಾಲೀಕರ ದುರಾಸಗೆ ಸ್ಥಳೀಯರು ಜೊತೆ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ. ಯಾಕಂದ್ರೆ, ಹಿಂದೂಗಳಲ್ಲಿ ಯಾರೂ ದನದ ಮಾಂಸ ತಿನ್ನೋದಿಲ್ಲ. ಹೀಗಿರುವಾಗ ಹೋಟೆಲ್‍ಗಳಲ್ಲಿ ಕುರಿ ಮಾಂಸ ಎಂದು ದನದ ಮಾಂಸ ಕೊಟ್ಟರೆ ಮನುಷ್ಯರ ಭಾವನೆ, ಸಿದ್ದಾಂತದ ಜೊತೆ ಆಟವಾಡಿದಂತೆ. ಹಾಗಾಗಿ, ಬಜರಂಗದಳದವರು ಕೂಡ ಹೋಟೆಲ್ ಮಾಲೀಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಇತಹ ಮೋಸದ ಜಾಲಕ್ಕೆ ಪೊಲೀಸರು ಸಂಪೂರ್ಣ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!