ಗೇರುಕಟ್ಟೆ: ಕೊರೊನಾ ವೈರಸ್ ದೇಶವ್ಯಾಪಿ ಹಬ್ಬಿದ್ದು ಇಡೀ ಭಾರತವೇ ಲಾಕ್ ಡೌನ್ ಅಗಿದ್ದು ಈ ನಡುವೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆಯ ದಾರ್ಖಾಸ್ ಎಂಬ ಹೊಳೆ ಪಕ್ಕದಲ್ಲಿ ಹಲವು ದಿನಗಳಿಂದ ಜೂಜಾಡುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ಮತ್ತು ತಂಡ ದಾಳಿ ಮಾಡಿದ್ದು ಈ ನಡುವೆ ಆರೋಪಿಗಳು ಪರಾರಿಯಾಗಿದ್ದಾರೆ.
ಬೆಳ್ತಂಗಡಿಯ ದಕ್ಷ ಅಧಿಕಾರಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ಕಾರ್ಯಚಟುವಟಿಕೆಯ ಬಗ್ಗೆ ಬೆಳ್ತಂಗಡಿ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಾರಿಯಾದ ವ್ಯಕ್ತಿಗಳು ವಾಹನಗಳನ್ನು ಇನ್ನೊಂದು ಸ್ಥಳದಲ್ಲಿ ಇಟ್ಟು ಹೋಗಿ ಜೂಜಾಟ ನಡೆಸುತ್ತಿದ್ದರು ಹಾಗೆ ಸರ್ಕಲ್ ಇನ್ಸ್ಪೆಕ್ಟರ್ ತಂಡಕ್ಕೆ ಆರೋಪಿಗಳ ಬಂಧನಕ್ಕೆ ತೊಂದರೆ ಅಗಿದೆ ಎನ್ನಲಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಪೋಲೀಸರ ಕಣ್ಣು ತಪ್ಪಿಸಿ ತಾಲೂಕಿನ ಅನೇಕ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಬೆಳ್ತಂಗಡಿಯ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗೇರುಕಟ್ಟೆ: ಜೂಜು ಅಡ್ಡೆಗೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ತಂಡದಿಂದ ದಾಳಿ
- Advertisement -
- Advertisement -
- Advertisement -