Thursday, June 4, 2026
Homeಕರಾವಳಿನೆಲ್ಯಾಡಿ‌ ಸಮೀಪ ಧ್ಯಾನ ಮಂದಿರದ ಹೆಸರಿನಲ್ಲಿ ಮತಾಂತರ ಆರೋಪ: ಹಿಂಜಾವೇ ದೂರಿನ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರಿಂದ...

ನೆಲ್ಯಾಡಿ‌ ಸಮೀಪ ಧ್ಯಾನ ಮಂದಿರದ ಹೆಸರಿನಲ್ಲಿ ಮತಾಂತರ ಆರೋಪ: ಹಿಂಜಾವೇ ದೂರಿನ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರಿಂದ ದಾಳಿ

- Advertisement -
- Advertisement -

ಪುತ್ತೂರು: ಧ್ಯಾನ ಮಂದಿರದ ಹೆಸರಿನಲ್ಲಿ ಮತಾಂತರ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದಲ್ಲಿ‌ ಪೊಲೀಸರು ದಾಳಿ ನಡೆಸಿದ್ದಾರೆ.

ಅನಧಿಕೃತ ಕಟ್ಟಡದಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ ನಡೆಸಿರುವ ಆರೋಪದಲ್ಲಿ ಹಿಂದೂ ಜಾಗರಣಾ ವೇದಿಕೆ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ದಾಳಿ ನಡೆದಿದೆ.

ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಮೂಲದ ಹಿಂದೂಗಳ ಮತಾಂತರಕ್ಕೆ ಯತ್ನ ನಡೆಸಿರುವ ಆರೋಪ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ ಮುಖಂಡರು ಭೇಟಿ ನೀಡಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಿಂದೂಗಳನ್ನು ಕರೆತಂದು ಧ್ಯಾನದ ಹೆಸರಿನಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದ ಬಗ್ಗೆ ಆರೋಪ ಮಾಡಿದ್ದಾರೆ.

- Advertisement -

Latest News

error: Content is protected !!