Saturday, September 19, 2026
Homeಪ್ರಮುಖ-ಸುದ್ದಿಪೊಲೀಸ್ ಇಲಾಖೆಯ ಸಭೆಗಳಲ್ಲಿ ‘ದಲಿತ’ ಪದ ಬಳಕೆ ಮಾಡದಂತೆ ಸೂಚನೆ

ಪೊಲೀಸ್ ಇಲಾಖೆಯ ಸಭೆಗಳಲ್ಲಿ ‘ದಲಿತ’ ಪದ ಬಳಕೆ ಮಾಡದಂತೆ ಸೂಚನೆ

- Advertisement -
- Advertisement -

ಪೊಲೀಸ್ ಇಲಾಖೆಯ ಸಭೆಗಳಲ್ಲಿ ‘ದಲಿತ’ ಎಂಬ ಪದ ಬಳಸದಂತೆ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡಿಜಿಪಿ ಕಚೇರಿಯಿಂದ ಸೂಚನೆ ನೀಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಆಲಿಸಲು ಠಾಣೆ ಹಾಗೂ ಪೊಲೀಸ್ ಕಚೇರಿಗಳಲ್ಲಿ ನಡೆಯುವ ಸಭೆಗಳನ್ನು ‘ದಲಿತ ಸಭೆ’ ಎಂದು ಕರೆಯಲಾಗುತ್ತಿತ್ತು. ಈ ಪದಪ್ರಯೋಗ ಅಸಂವಿಧಾನಿಕವಾಗಿದೆ ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರಾಜ್ಯದ ಎಲ್ಲ ನಗರ ಪೊಲೀಸ್ ಆಯುಕ್ತರು, ವಲಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದೆ. ಇನ್ನು ಮುಂದೆ ಇಂತಹ ಸಭೆಗಳಿಗೆ ‘ದಲಿತ ಸಭೆ’ ಎಂಬ ಪದ ಬಳಸದೆ, ಸೂಕ್ತ ಅಧಿಕೃತ ಪದಪ್ರಯೋಗ ಬಳಸುವಂತೆ ಸೂಚಿಸಲಾಗಿದೆ.

- Advertisement -

Latest News

error: Content is protected !!