Saturday, June 29, 2024
Homeಕರಾವಳಿಮಂಗಳೂರು: ಅಕ್ರಮ ವಲಸಿಗರ ಪತ್ತೆಗೆ ಪೊಲೀಸರು ಅಲರ್ಟ್; ಮಂಗಳೂರಿನಲ್ಲಿ ಸೂಕ್ತ ದಾಖಲಾತಿ ಇಲ್ಲದ 518 ಮಂದಿ...

ಮಂಗಳೂರು: ಅಕ್ರಮ ವಲಸಿಗರ ಪತ್ತೆಗೆ ಪೊಲೀಸರು ಅಲರ್ಟ್; ಮಂಗಳೂರಿನಲ್ಲಿ ಸೂಕ್ತ ದಾಖಲಾತಿ ಇಲ್ಲದ 518 ಮಂದಿ ವಶಕ್ಕೆ – ಬಿಹಾರ, ಒರಿಸ್ಸಾ ಕಾರ್ಮಿರೆಂದು ಹೇಳಿದವರೇ ಗುರಿ

spot_img
- Advertisement -
- Advertisement -

ಮಂಗಳೂರು, ಜುಲೈ 4: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗಾಗಿ ಕಾರ್ಯಾಚರಣೆ ನಡೆಸಬೇಕೆಂಬ ಗೃಹ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.


ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಮಾದರಿಗಳಲ್ಲಿ ಕೆಲಸ ಮಾಡುತ್ತಿರುವ 4 ಸಾವಿರಕ್ಕೂ ಹೆಚ್ಚು ಉತ್ತರ ಭಾರತೀಯರೆಂದು ಹೇಳಿಕೊಂಡಿದ್ದ ಕಾರ್ಮಿಕರನ್ನು ಪತ್ತೆ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಪೈಕಿ ಸೂಕ್ತ ದಾಖಲಾತಿ ಇಲ್ಲದ 518 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಮಂಗಳೂರು ನಗರದ ರೊಸಾರಿಯೋ ಶಾಲಾ ಸಭಾಂಗಣದಲ್ಲಿ ಸೋಮವಾರ 518 ಮಂದಿಯನ್ನು ಕೂಡಿಹಾಕಲಾಗಿತ್ತು. ಪ್ರತೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡಿಸುವ ಗುತ್ತಿಗೆದಾರರು, ಕೈಗಾರಿಕೆ ಸಂಕೀರ್ಣಗಳನ್ನು ಭೇಟಿಯಾಗಿ ಪೊಲೀಸರು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮಾಹಿತಿ ಸಂಗ್ರಹ ಮಾಡಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಎಂದು ಹೇಳಿಕೊಂಡು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಗುರಿಯಾಗಿಸಿ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದು, ಆ ಪೈಕಿ 518 ಮಂದಿಯನ್ನು ವಶಕ್ಕೆ ಪಡೆದು ಮಂಗಳೂರಿನ ಸಭಾಂಗಣದಲ್ಲಿ ಕೂಡಿಹಾಕಲಾಗಿತ್ತು. ಅವರಲ್ಲಿ ಸೂಕ್ತ ದಾಖಲಾತಿ ಇಲ್ಲದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಯೊಬ್ಬರಿಂದ ತಲಾ 20 ಪ್ರಶ್ನಾವಳಿಗಳನ್ನು ಮುಂದಿಟ್ಟು ಉತ್ತರ ಪಡೆಯಲಾಗುತ್ತಿದೆ. ವಿಳಾಸ ದಾಖಲೆ, ಊರು, ಕೆಲಸ ಮಾಡುವ ಸಂಸ್ಥೆ ಉಳಿದುಕೊಂಡ ಜಾಗದ ಬಗ್ಗೆ ಮಾಹಿತಿ, ಮೊಬೈಲ್ ನಂಬರ್, ಸಂಬಂಧಿಕರ ನಂಬರ್ ಹೀಗೆ ಸುಮಾರು 20 ಪ್ರಶ್ನೆಗಳನ್ನು ರೆಡಿ ಮಾಡಿದ್ದು ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೂಕ್ತವಾಗಿ ಸ್ಪಂದಿಸದ ಕಾರಣಕ್ಕೆ ಅವರನ್ನು ವಶಕ್ಕೆ ಪಡೆದು ಸೂಕ್ತ ದಾಖಲಾತಿ ನೀಡುವಂತೆ ಸೂಚನೆ ನೀಡಲಾಗಿದೆ.


ಕರಾವಳಿಯಲ್ಲಿ ಹಿಂದಿನಿಂದಲೂ ಉಗ್ರರು ಅಡಗಿಕೊಂಡಿದ್ದಾರೆ, ಉಗ್ರರ ಕ್ಲೀಪರ್ ಸೆಲ್ ಎಂಬ ಹಣೆಪಟ್ಟಿ ಇದೆ. ಅಲ್ಲದೆ, ಬಾಂಗ್ಲಾದೇಶ ಮೂಲದ ಪ್ರಜೆಗಳು ಇಲ್ಲಿ ಕಾರ್ಮಿಕರಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿಗಳಿದ್ದವು. ಆದರೆ, ಈ ಬಗ್ಗೆ ದೊಡ್ಡ ಮಟ್ಟದ ಪೊಲೀಸ್‌ ಕಾರ್ಯಾಚರಣೆ ಈತನಕ ನಡೆದಿಲ್ಲ. ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಂಗ್ಲಾ ದೇಶದ ಪ್ರಜೆಗಳು ಕಟ್ಟಡ ನಿರ್ಮಾಣ, ಮರದ ಮಿಲ್ ಗಳಲ್ಲಿ ಕೆಲಸದಲ್ಲಿ ತೊಡಗಿಸಿದ್ದಾರೆಂಬ ಅನುಮಾನ ಇದೆ. ಹೆಚ್ಚಿನವರು ತಾವು ಪಶ್ಚಿಮ ಬಂಗಾಳದವರೆಂದು ಹೇಳಿಕೊಂಡು ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.


ಡುಪ್ಲಿಕೇಟ್ ಮಾಡಿಕೊಂಡಿರುತ್ತಾರೆ. ಕಾರ್ಡನ್ನೂ ವರ್ಷದ ಹಿಂದೆ ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಮಣ್ಣು ಕುಸಿದು ಮೃತಪಟ್ಟ ಇಬ್ಬರು ಕಾರ್ಮಿಕರ ಖಚಿತ ವಿವರಗಳು ದೊರಕಿರಲಿಲ್ಲ. ಪಶ್ಚಿಮ ಬಂಗಾಳ ಎಂದಷ್ಟೇ ಮಾಹಿತಿ ಇತ್ತು. ಮೃತರನ್ನು ಬಾಂಗ್ಲಾ ಪ್ರಜೆಗಳು ಎಂದು ಹೇಳಲಾಗಿತ್ತು.

- Advertisement -
spot_img

Latest News

error: Content is protected !!