Sunday, June 29, 2025
Homeಕರಾವಳಿಮಂಗಳೂರು: ಸ್ಫೋಟಕ ಪತ್ತೆ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ‌  ಸಾವು

ಮಂಗಳೂರು: ಸ್ಫೋಟಕ ಪತ್ತೆ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ‌  ಸಾವು

spot_img
- Advertisement -
- Advertisement -

ಮಂಗಳೂರು: 11 ವರ್ಷಗಳಿಂದ ಮಂಗಳೂರು ಪೊಲೀಸ್‌ ವಿಭಾಗದ ಸ್ಫೋಟಕ ಪತ್ತೆ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೀತಾ ಹೆಸರಿನ ಶ್ವಾನ ನಿನ್ನೆ ಮೃತಪಟ್ಟಿದೆ.

11 ವರ್ಷ 2 ತಿಂಗಳಿನ ಲ್ಯಾಬ್ರಡಾರ್‌ ರಿಟ್ರೇವರ್‌ ತಳಿಯ ಈ ಶ್ವಾನ 11 ವರ್ಷಗಳ ಕಾಲ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿತ್ತು.

ಗಣ್ಯರ ಆಗಮನ ಸೇರಿದಂತೆ ಬಂದೋಬಸ್ತ್ ಸಂದರ್ಭ ಸ್ಫೋಟಕ ಪತ್ತೆ ಕಾರ್ಯವನ್ನು ಈ ಶ್ವಾನ ಯಶಸ್ವಿಯಾಗಿ ನಿರ್ವಹಿಸಿತ್ತು. ಪೊಲೀಸ್ ಸಿಬ್ಬಂದಿ‌ ಗೌರವಯುತವಾಗಿ ಶ್ವಾನದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

- Advertisement -
spot_img

Latest News

error: Content is protected !!