Wednesday, June 24, 2026
Homeಕರಾವಳಿಬೆಳ್ತಂಗಡಿ: ಪ್ರತಿದಿನ ರಾತ್ರಿ ಅಪ್ರಾಪ್ತೆಯ ಮನೆಗೆ ಬರುತ್ತಿದ್ದ ಯುವಕ; ರೆಡ್ ಹ್ಯಾಂಡಾಗಿ‌ ಹಿಡಿದ ಸ್ಥಳೀಯರು

ಬೆಳ್ತಂಗಡಿ: ಪ್ರತಿದಿನ ರಾತ್ರಿ ಅಪ್ರಾಪ್ತೆಯ ಮನೆಗೆ ಬರುತ್ತಿದ್ದ ಯುವಕ; ರೆಡ್ ಹ್ಯಾಂಡಾಗಿ‌ ಹಿಡಿದ ಸ್ಥಳೀಯರು

- Advertisement -
- Advertisement -

ಬೆಳ್ತಂಗಡಿ: ಪ್ರತಿದಿನ ರಾತ್ರಿ ಅಪ್ರಾಪ್ತೆಯ ಮನೆಗೆ ಬರುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ಹಿಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ‌ ನಡೆದಿದೆ. ಇದೀಗ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ನಿಡ್ಲೆ ಕುದ್ರಾಯ ಸಮೀಪ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಬೈಕ್ ನಿಲ್ಲಿಸಲಾಗುತ್ತಿದ್ದ ವ್ಯಕ್ತಿ ಯಾರು ಎಂಬುದು ಇಲ್ಲಿನ ಸ್ಥಳೀಯರ ಬಹುದೊಡ್ಡ ಪ್ರಶ್ನೆಯಾಗಿತ್ತು. ಅಲ್ಲದೇ ಅಕ್ರಮ ಸಂಬಂಧ ಎಂಬ ಸುದ್ದಿ ಹಬ್ಬಿದ್ದು ಸ್ಥಳೀಯ ಕೆಲ ಕೆಂಪು ಬೈಕು ಹೊಂದಿದವರ ಮೇಲೆ ಅನುಮಾನದ ಮೂಡಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ಬೈಕ್ ಇದ್ದದ್ದನ್ನು ಗಮನಿಸಿದ ಸ್ಥಳೀಯರು, ಆತ ಯಾರು ಎಂದು ತಿಳಿಯಲು ರಾತ್ರಿ ಕಾದು ಮುಂಜಾನೆ 5ರ ವೇಳೆಗೆ ಆತನನ್ನು ಹಿಡಿದಿದ್ದಾರೆ.

ಇನ್ನು ಧರ್ಮಸ್ಥಳ ಸಮೀಪದ ಅಶೋಕನಗರದ ನಿವಾಸಿಯಾಗಿರುವ ಈ ಯುವಕ, ತನ್ನ ಸ್ನೇಹಿತೆ ಅಪ್ರಾಪ್ತ ಬಾಲಕಿಯೋರ್ವಳೊಂದಿಗೆ ಸಂಬಂಧ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದೆ.

ಅಲ್ಲದೇ ಆತ ತಡರಾತ್ರಿ ಸ್ನೇಹಿತೆಯ ಮನೆಗೆ ಬಂದು ಮನೆಯವರಿಗೆ ತಿಳಿಯದಂತೆ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಇದನ್ನು ಕಂಡ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಸದ್ಯ ಬಾಲಕಿಯ ಕಡೆಯವರ ದೂರಿನ ಹಿನ್ನಲೆಯಲ್ಲಿ ಯುವಕನ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.

- Advertisement -

Latest News

error: Content is protected !!