Wednesday, June 24, 2026
Homeಅಪರಾಧಮಹಿಳೆಗೆ ಅಶ್ಲೀಲ ಕರೆ ಮಾಡಿದ ಪೊಲೀಸ್ ಪೇದೆಯ ಬಂಧನ

ಮಹಿಳೆಗೆ ಅಶ್ಲೀಲ ಕರೆ ಮಾಡಿದ ಪೊಲೀಸ್ ಪೇದೆಯ ಬಂಧನ

- Advertisement -
- Advertisement -

ಮೂಡಬಿದಿರೆ: ಮಹಿಳೆಯೋರ್ವರು ದೂರು ನೀಡಲು ಠಾಣೆಗೆ ಬಂದಿದ್ದು, ಪೊಲೀಸ್‌ ಪೇದೆಯೊಬ್ಬರು ಮಹಿಳೆಗೆ ಪದೇ ಪದೇ ಅಶ್ಲೀಲ ಕರೆಗಳು ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡಿದ ಆರೋಪದಡಿ ಮೂಡುಬಿದಿರೆ ಠಾಣೆಯ ಪೊಲೀಸ್ ಪೇದೆಯನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪೇದೆ ಶಾಂತಪ್ಪ (28) ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಇನ್ನು ಬಂಧನಕ್ಕೂ ಮುನ್ನವೇ ಪೊಲೀಸ್ ಆಯುಕ್ತರು ಅವರನ್ನು ಅಮಾನತುಗೊಳಿಸಿದ್ದರೆ ಎನ್ನಲಾಗಿದೆ.

ಘಟನೆಯ ವಿವರ: ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಗೆ ಆಗಸ್ಟ್ 25ರಂದು ದೂರು ನೀಡಲು ಬಂದಿದ್ದರು. ಈ ಸಂದರ್ಭದಲ್ಲಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಶಾಂತಪ್ಪ ಅವರು ಮಹಿಳೆಯ ಮೊಬೈಲ್ ನಂಬರ್ ಬರೆದುಕೊಂಡಿದ್ದು, ನಂತರ, ಇನ್ಸ್‌ಪೆಕ್ಟರ್ ದಂಪತಿಯನ್ನು ಠಾಣೆಗೆ ಕರೆಸಿ ಪ್ರಕರಣದ ಕುರಿತು ವಿಚಾರಿಸಿ ಕಳುಹಿಸಿಕೊಟ್ಟಿದ್ದರು. ಆದರೆ ಇದರ ನಂತರ ಶಾಂತಪ್ಪ ದೂರು ಕೊಟ್ಟ ಮಹಿಳೆಗೆ ಮೂರು ಬಾರಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಕರೆಯ ದಾಖಲೆಗಳನ್ನು ಪುರಾವೆಯಾಗಿ ನೀಡಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವರಾದ ಶಾಂತಪ್ಪ 2022ರಲ್ಲಿ ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರಿದ್ದರು.

- Advertisement -

Latest News

error: Content is protected !!