Saturday, June 13, 2026
Homeಕರಾವಳಿಮಂಗಳೂರುಮಂಗಳೂರು : ಪಟಾಕಿ ಅಂಗಡಿ ಮಾಲೀಕನನ್ನು ಬೆದರಿಸಿ ಸುಲಿಗೆ ಮಾಡಿದ ಪ್ರಕರಣ; ಮೂವರು ಆರೋಪಿಗಳನ್ನು ಬಂಧಿಸಿದ...

ಮಂಗಳೂರು : ಪಟಾಕಿ ಅಂಗಡಿ ಮಾಲೀಕನನ್ನು ಬೆದರಿಸಿ ಸುಲಿಗೆ ಮಾಡಿದ ಪ್ರಕರಣ; ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು : ಪಟಾಕಿ ಅಂಗಡಿ ಮಾಲೀಕನನ್ನು ಬೆದರಿಸಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.ರೌಡಿ ಶೀಟರ್ ಪ್ರಶಾಂತ್ ಕಳವಾರು ಯಾನೆ ಪಚ್ಚು, ಗಣೇಶ್ ಮತ್ತು ಅಶ್ವಿತ್ ಬಂಧಿತ ಆರೋಪಿಗಳು.

ಬಂಧಿತರ ಪೈಕಿ ಪ್ರಶಾಂತ್ ಕಳವಾರು ವಿರುದ್ಧ ಕೊಲೆ ಮತ್ತು ನಾಲ್ಕು ಕೊಲೆಯತ್ನ ಪ್ರಕರಣಗಳು ಸೇರಿದಂತೆ ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದ 14 ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೋರ್ವ ಆರೋಪಿ ಗಣೇಶ್ ವಿರುದ್ಧ 4 ಪ್ರಕರಣಗಳಿವೆ, ಇದರಲ್ಲಿ ಎರಡು ಕೊಲೆಯತ್ನ ಪ್ರಕರಣಗಳು ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದಲ್ಲಿವೆ. ಅಶ್ವಿತ್ ವಿರುದ್ಧ ಒಂದು ಪ್ರಕರಣವಿದ್ದು, ಅದನ್ನು ಖುಲಾಸೆಗೊಳಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!