Saturday, June 6, 2026
Homeಕರಾವಳಿಮಂಗಳೂರು: ಕೃಷ್ಣಾಪುರದಲ್ಲಿ ಚೂರಿ ಇರಿತ, ಹಲ್ಲೆ ಪ್ರಕರಣದಲ್ಲಿ ಐವರ ಬಂಧನ

ಮಂಗಳೂರು: ಕೃಷ್ಣಾಪುರದಲ್ಲಿ ಚೂರಿ ಇರಿತ, ಹಲ್ಲೆ ಪ್ರಕರಣದಲ್ಲಿ ಐವರ ಬಂಧನ

- Advertisement -
- Advertisement -

ಮಂಗಳೂರು: ಫೆಬ್ರವರಿ 1 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಆರನೇ ಬ್ಲಾಕ್‌ನಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೊಹಮ್ಮದ್ ಶರೋಜ್ ಚಾರು (24), ಮೊಹಮ್ಮದ್ ಮುಸ್ತಫಾ (22), ಅಬ್ದುಲ್ ಅಮೀನ್ (19), ಹಲ್ಲೆ ನಡೆಸಲು ಕಾರು ಒದಗಿಸಿದ ಸಿದ್ದಿಕ್ ಸಮದ್ (25) ಮತ್ತು ಮೊಹಮ್ಮದ್ ನೌಫಿಲ್ (18) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಫೆ.1ರ ರಾತ್ರಿ ತನ್ನ ಸ್ನೇಹಿತರಾದ ಅಬೂಬಕ್ಕರ್ ಮತ್ತು ಹಾರಿಸ್ ಜತೆ ಮಾತನಾಡುತ್ತಿದ್ದ ಮಹಮ್ಮದ್ ಅನಸ್ ಎಂಬಾತನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದರು.

ಅನಾಸ್ ನೀಡಿದ ದೂರಿನ ಮೇರೆಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರ ಮೇಲೆ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ.

- Advertisement -

Latest News

error: Content is protected !!