Tuesday, June 23, 2026
Homeಕರಾವಳಿಆರ್ ಎಸ್ ಎಸ್ ಮತ್ತು ಹಿಂದೂ ಕಾರ್ಯಕರ್ತರ ಮನೆಗೆ ಮಧ್ಯರಾತ್ರಿ ತೆರಳಿ ಪೊಲೀಸರಿಂದ ಕಿರುಕುಳ ಆರೋಪ;...

ಆರ್ ಎಸ್ ಎಸ್ ಮತ್ತು ಹಿಂದೂ ಕಾರ್ಯಕರ್ತರ ಮನೆಗೆ ಮಧ್ಯರಾತ್ರಿ ತೆರಳಿ ಪೊಲೀಸರಿಂದ ಕಿರುಕುಳ ಆರೋಪ; ನೊಂದ ಮಹಿಳೆಯರಿಂದ ಪೊಲೀಸರಿಗೆ ಮನವಿ

- Advertisement -
- Advertisement -

ಬಂಟ್ವಾಳ: ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಸಮಾಜದಲ್ಲಿ ಗುರುತಿಸಿಕೊಂಡ ಆರ್ ಎಸ್ ಎಸ್ ಮತ್ತು ಹಿಂದೂ ಕಾರ್ಯಕರ್ತರ ಮನೆಗೆ ಮಧ್ಯರಾತ್ರಿ ತನಿಖೆಯ ನೆಪದಲ್ಲಿ  ತೆರಳಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನೊಂದ ಮಹಿಳೆಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಅಪರಾಧಿಕ ಹಿನ್ನೆಲೆ ಇರದ ಕೆಲವು ಹಿರಿಯ ಹಿಂದೂ ಮುಖಂಡರ ಮನೆಗೆ ತಡ ರಾತ್ರಿ ತೆರಳಿ ಅಮಾನವೀಯವಾಗಿ ವರ್ತಿಸುವುದಲ್ಲದೆ, ವೈಯುಕ್ತಿಕ ಛಾಯಾ ಚಿತ್ರಗಳನ್ನು ತೆಗೆದು, ಮನೆಯ ಜಿ.ಪಿ.ಎಸ್ ದಾಖಲಿಸಿ ಭಯ ಮತ್ತು ಆತಂಕ ನಿರ್ಮಿಸುವುದು ನಮ್ಮ ಖಾಸಗಿ ಜೀವನಕ್ಕೆ ಮತ್ತು ಮೂಲಭೂತ ಹಕ್ಕುಗಳಿಗೆ ದ ಉಂಟು ಮಾಡುತ್ತಿದೆ ಎಂದು ಮಹಿಳೆಯರು ದೂರಿನಲ್ಲಿ ಮನವಿ ಮಾಡಿದ್ದಾರೆ.

ನೊಂದ ಮಹಿಳೆಯರ ನಿಯೋಗ ಗುರುವಾರ ಸಂಜೆ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಭೇಟಿ ನೀಡಿ ಮನವಿ ಸಲ್ಲಿಸಿ, ಪೊಲೀಸ್ ಸಿಬ್ಬಂದಿ ಈ ಅತಿರೇಕದ ವರ್ತನೆಯನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೇ ತಪ್ಪಿತಸ್ಥ ಸಿಬ್ಬಂದಿವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ನಿಯೋಗ ಆಗ್ರಹಿಸಿದೆ. ಇಂತಹದ್ದೇ ಘಟನೆ ಮತ್ತೆ ಪುನಾರವರ್ತನೆಯಾದರೆ ಅದಕ್ಕೆ ಪೊಲೀಸರೇ ಹೊಣೆ ಎಂದು ಎಚ್ಚರಿಸಿದ್ದಾರೆ.ಇನ್ನು ಮಹಿಳಾ ನಿಯೋಗದಲ್ಲಿ ಗಿರಿಜಾ, ಪೂರ್ಣಿಮಾ, ಲಿಖಿತಾ ಆರ್ ಶೆಟ್ಟಿ, ಸುಲೋಚನ ಭಟ್ ಮುಂತಾದವರು ಉಪಸ್ಥಿತರಿದ್ದರು

- Advertisement -

Latest News

error: Content is protected !!