- Advertisement -
- Advertisement -
ಶಿರ್ಲಾಲು: ಲಾಕ್ಡೌನ್ ಹಿನ್ನೆಲೆ ತಮ್ಮ ಗ್ರಾಮವನ್ನು ಹಸಿವು ಮುಕ್ತಗೊಳಿಸಲು ಆರಂಭಿಸಿದ್ದ ವಾಟ್ಸ್ಆ್ಯಪ್ ಗ್ರೂಪ್ಗೆ ಇಬ್ಬರು ಪುಟಾಣಿಗಳು 500 ರೂ. ನೀಡುವ ಮೂಲಕ ಅಳಿಲು ಸೇವೆ ಮಾಡಿದ್ದಾರೆ.
ಶಿರ್ಲಾಲು ಕರಂಬಾರು ಬೀಟ್ ಪೊಲೀಸರ ನೇತೃತ್ವದಲ್ಲಿ, ಪಂಚಾಯಿತಿ ನೌಕರರು, ಗ್ರಾಮದ ಸಮಾನ ಮನಸ್ಕ ಯುವಕರು ದಾನಿಗಳ ನೆರವಿನ ಹಸಿವು ಮುಕ್ತ ಗ್ರಾಮಕ್ಕಾಗಿ ಎಂಬ ವಾಟ್ಸಪ್ ತಂಡದ ಸೇವೆಯಿಂದ ಪ್ರೇರಣೆಗೊಂಡ ಬೇಬಿ ನಿಜ(6ನೇ ತರಗತಿ), ಬೇಬಿ ಮೃದುಲಾ (2ನೇ ತರಗತಿ)ಅಮ್ಮ ನೀಡುತ್ತಿದ್ದ ಪಾಕೆಟ್ ಹಣವನ್ನು ಒಟ್ಟುಗೂಡಿಸಿ 500 ರೂಪಾಯಿಯನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಶಿರ್ಲಾಲು ಗ್ರಾಮದ ಆರೋಗ್ಯ ಸಹಾಯಕಿಯಾದ ಜಯಲಕ್ಷ್ಮಿ ಅವರ ಮಕ್ಕಳಾದ ಈ ಪುಟಾಣಿಗಳು ಬೆಳ್ತಂಗಡಿ ಚರ್ಚ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.
- Advertisement -