Thursday, May 16, 2024
Homeತಾಜಾ ಸುದ್ದಿದೇಶದ ಜನತೆಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

ದೇಶದ ಜನತೆಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

spot_img
- Advertisement -
- Advertisement -

ನವದೆಹಲಿ : ಭಾರತ ಸೇರಿದಂತೆ ಇತರೇ ರಾಷ್ಟ್ರಗಳು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದ್ದು, ಸಮಯದ ಜೊತೆಗೆ ನಾವು ಬದಲಾಗಬೇಕಿದೆ. ಈ ಸಂಕಷ್ಟದ ದಿನಗಳಿಂದ ಆದಷ್ಟು ಬೇಗ ಹೊರಬರುವ ವಿಶ್ವಾಸವಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಸಹಾಯ ಮಾಡಿ ಎಂದು ದೇಶದ ಜನತೆಗೆ ಪ್ರಧಾನಿ ಮೋದಿ ಕರೆನೀಡಿದ್ದಾರೆ.

ಬುದ್ದ ಪೂರ್ಣಿಮೆ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಭಗವಾನ್ ಬುದ್ದನ ಅನುಯಾಯಿಗಳಿಗೆ ಶುಭಕೋರಿದರು. ಸಮಯದ ಜೊತೆಗೆ ನಾವು ಬದಲಾಗಬೇಕೆಂದು ಪ್ರಧಾನಿ ಕರೆನೀಡಿದರು.

ದೇಶದ ಜನತೆಯನ್ನು ಭೇಟಿಯಾಗುವುದಕ್ಕೆ ಪರಿಸ್ಥಿತಿ ಅವಕಾಶ ನೀಡುತ್ತಿಲ್ಲ. ವಿಶ್ವ ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2015-18ರಲ್ಲಿ ದೆಹಲಿ, ಕೊಲಂಬೋ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ ಬುದ್ಧನ ವಿಚಾರಗಳು ಈ ಸಂಕಷ್ಟದಲ್ಲಿ ಪ್ರಸ್ತುತವಾಗಿದೆ. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವವರ ಅಗತ್ಯವಿದೆ. ಬುದ್ದನ ಅನುಯಾಯಿಗಳು ಮಾನವೀಯತೆಯಿಂದ ಸೇವೆ ಮಾಡುವವರು. ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆ. ಈ ಸಂಕಷ್ಟದ ಪರಿಸ್ಥಿತಿಯನ್ನು ನಾವು ಸಾಂಘಿಕವಾಗಿ ಎದುರಿಸುತ್ತಿದ್ದೇವೆ. ಭಾರತದ ಸಂಸ್ಕೃತಿ ಯಾವಾಗಲೂ ಹೊಸ ದಾರಿ ತೋರಿಸಿದೆ. ಸಮಯ ಬದಲಾಯ್ತು, ಸ್ಥಿತಿ ಬದಲಾಯ್ತು, ಸಾಮಾಜಿಕ ವ್ಯವಸ್ಥೆ ಬದಲಾಯ್ತು. ಆದರೆ, ಬುದ್ದ ಯಾವುದೋ ಒಂದು ಪರಿಸ್ಥಿತಿಗೆ ಸೀಮಿತವಾಗಿಲ್ಲ, ಬುದ್ಧನ ಸಂದೇಶ ನಮ್ಮ ಜೀವನದಲ್ಲಿ ನಿರಂತರವಾಗಿ ಮುಂದುವರೆದಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದೆ. ಭಾರತದ ಸಂಸ್ಕೃತಿ ಯಾವಾಗಲೂ ವಿಶ್ವಕ್ಕೆ ಮಾರ್ಗದರ್ಶಿ. ನಮ್ಮ ಕೆಲಸ ಸೇವೆಯ ಮನೋಭಾವದಿಂದ ಕೂಡಿರಬೇಕು. ಎಲ್ಲರೂ ಸೇರಿ ಹೋರಾಡಿದರೆ ಸಂಕಷ್ಟದಿಂದ ಪಾರಾಗಬಹುದು. ಬುದ್ದ ಹೆಸರು ಮಾತ್ರವಲ್ಲ, ಪವಿತ್ರ ವಿಚಾರ ಎಂದು ಹೇಳಿದರು.

ಇನ್ನು ಕಠಿಣ ಸ್ಥಿತಿಯಲ್ಲೂ ಜಯ ಗಳಿಸಬೇಕಾಗಿದೆ. ಸುಸ್ತಾಗಿ ನಿಲ್ಲುವುದರಿಂದ ಅದು ಬುದ್ದ ನಾಲ್ಕು ಸತ್ಯಗಳನ್ನು ಹೇಳಿದ್ದಾರೆ. ದಯೆ, ಕರುಣೆ, ಸುಖ-ದುಃಖ ಅವುಗಳನ್ನು ಹೇಗೆದೆಯೋ ಅದನ್ನು ಹಾಗೇ ಪಾಲಿಸಬೇಕೆಂದು ಬುದ್ದ ಹೇಳಿದ್ದಾರೆ. ಕೊರೊನಾದಿಂದ ವಿಶ್ವದಲ್ಲಿ ಹತಾಶೆ ಮೂಡಿದೆ. ಹೀಗಾಗಿ ಎಷ್ಟು ಸಾಧ್ಯವಾಗುತ್ತದೆಯೇ ಅಷ್ಟು ಸಹಾಯ ಮಾಡಿ ಎಂದು ಪ್ರಧಾನಿ ಕರೆನೀಡಿದರು. ಭಾರತದ ಪ್ರಗತಿ ಯಾವಾಗಲೂ ಜಾಗತಿಕ ಪ್ರಗತಿಗೆ ಸಹಕಾರಿಯಾಗಿದೆ. ಈ ಸಂದರ್ಭದಲ್ಲಿ ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ದೇಶದ ಜನರ ಕಷ್ಟ ಕಡಿಮೆ ಮಾಡಲು ಪ್ರಯತ್ನಿಸಬೇಕೆಂದು ಪ್ರಧಾನಿ ದೇಶವಾಸಿಗಳಿಗೆ ಕರೆನೀಡಿದ್ದಾರೆ.

- Advertisement -
spot_img

Latest News

error: Content is protected !!