Thursday, June 4, 2026
Homeಕರಾವಳಿಮುಂಬೈನಲ್ಲಿ ಕೊರೊನಾ ರಣಕೇಕೆ : ಮಹಾಮಾರಿಗೆ ಒಂದೇ ದಿನ 25 ಮಂದಿ ಬಲಿ

ಮುಂಬೈನಲ್ಲಿ ಕೊರೊನಾ ರಣಕೇಕೆ : ಮಹಾಮಾರಿಗೆ ಒಂದೇ ದಿನ 25 ಮಂದಿ ಬಲಿ

- Advertisement -
- Advertisement -

ಮುಂಬೈ : ಮುಂಬೈನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಮುಂಬೈ ನಗರವೊಂದರಲ್ಲೇ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, 24 ಗಂಟೆಗಳಲ್ಲಿ 769 ಹೊಸ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

ಮುಂಬೈನಲ್ಲಿ ಒಂದೇ ದಿನ ಕೊರೊನಾ ವೈರಸ್ ಗೆ 25 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಮುಂಬೈನಲ್ಲಿ ಸಾವನ್ನಪ್ಪಿರುವ ಸಂಖ್ಯೆ 412 ಕ್ಕೆಏರಿಕೆಯಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ಮುಂಬೈನಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ಪತ್ತೆಯಾದ ಬಳಿಕ 56 ದಿನಗಳ ಅಂತರದಲ್ಲೇ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ನು ಮಹಾರಾಷ್ಟ್ರದಲ್ಲಿ ಒಟ್ಟು 16,758 ಕೊರೊನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 651 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!