Saturday, May 18, 2024
Homeತಾಜಾ ಸುದ್ದಿಚೀನಾ ಗಡಿ ವಿವಾದ: ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರಕಾರಕ್ಕೆ ವಿರೋಧ ಪಕ್ಷಗಳ ಬೆಂಬಲ

ಚೀನಾ ಗಡಿ ವಿವಾದ: ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರಕಾರಕ್ಕೆ ವಿರೋಧ ಪಕ್ಷಗಳ ಬೆಂಬಲ

spot_img
- Advertisement -
- Advertisement -

ಹೊಸದಿಲ್ಲಿ: ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಎಲ್ಲಾ ಪಕ್ಷಗಳು ಸಕರ್ಾರದ ಜೊತೆ ನಿಲ್ಲುವುದಾಗಿ ಬೆಂಬಲ ಘೋಷಿಸಿದವು.

ಸಭೆಯ ಪ್ರಾರಂಭದಲ್ಲಿ ಗಲ್ವಾನ್ ನಲ್ಲಿ ಚೀನೀ ಯೋಧರ ಅಮಾನುಷ ಹಲ್ಲೆಗೆ ಬಲಿಯಾಗಿ ಹುತಾತ್ಮರಾದ ಭಾರತೀಯ ಯೋಧರಿಗೆ ನಮನ ಸಲ್ಲಿಸಲಾಯಿತು.

ಶುಕ್ರವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸರ್ವ ಪಕ್ಷ ಸಭೆಯಲ್ಲಿ ಕಾಂಗ್ರೆಸ್ ಘಟನೆಯ ಮಾಹಿತಿ ಪೂರ್ಣ ನೀಡಿಲ್ಲ ಎಂದು ಟೀಕೆ ಮಾಡಿದರೂ ನಂತರ ಎಲ್ಲಾ ಪಕ್ಷಗಳು ಸರ್ಕಾರದ ಜೊತೆಗಿರುವುದಾಗಿ ಘೋಷಿಸಿದವು.

ದೇಶದ ಸಾರ್ವಭೌಮತ್ವದ ವಿಷಯ ಬಂದಾಗ ಇಡೀ ದೇಶ ಒಂದಾಗಲಿದೆ ಎಂಬುದನ್ನು ಸರ್ವಪಕ್ಷ ಸಭೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಎಲ್ಲಾ ಪಕ್ಷಗಳು ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ಸಹಮತ ವ್ಯಕ್ತಪಡಿಸಿವೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

  • ‘ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಇದು ನಮ್ಮ ಭಾವನೆ. ನಾವು ಪ್ರಧಾನಿ ಜತೆಗಿದ್ದೇವೆ. ನಮ್ಮ ಸೇನಾ ಪಡೆಗಳ ಹಾಗೂ ಅವರ ಕುಟುಂಬದವರ ಜತೆ ನಾವಿದ್ದೇವೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
  • ‘ಚೀನಾ ಪ್ರಜಾಪ್ರಭುತ್ವ ರಾಷ್ಟ್ರವಲ್ಲ. ಅವರದ್ದು ಸರ್ವಾಧಿಕಾರ. ಅವರು ಅಂದುಕೊಂಡದ್ದನ್ನು ಅವರು ಮಾಡಬಲ್ಲರು. ಇನ್ನೊಂದೆಡೆ ನಾವು ಜತೆಯಾಗಿ ಕೆಲಸ ಮಾಡಬೇಕಿದೆ. ಹೀಗೆ ಮಾಡಿದಲ್ಲಿ ಭಾರತವೇ ಗೆಲ್ಲಲಿದೆ, ಚೀನಾಗೆ ಸೋಲಾಗಲಿದೆ. ಒಗ್ಗಟ್ಟಿನಿಂದ ಮಾತನಾಡೋಣ, ಒಗ್ಗಟ್ಟಾಗಿ ಯೋಚಿಸೋಣ, ಒಗ್ಗೂಡಿ ಕೆಲಸ ಮಾಡೋಣ. ನಾವು ದೃಢವಾಗಿ ಸರ್ಕಾರದ ಜತೆ ನಿಲ್ಲುತ್ತೇವೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
  • ಭಾರತದ ವರ್ಚಸ್ಸನ್ನು ಜಾಗತಿ ಮಟ್ಟದಲ್ಲಿ ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಪ್ರಧಾನಿಯವರೇ, ನೀವು ನಮ್ಮ ಶಕ್ತಿ. ಭಾರತದ ಬಗ್ಗೆ ಅನೇಕರಿಗೆ ಅಸೂಯೆಗಳಿವೆ. ಅವರು (ಚೀನಾ) ಭಾರತವನ್ನು ಅಸ್ಥಿರಗೊಳಿಸಲು ಹವಣಿಸುತ್ತಿದ್ದಾರೆ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!