Thursday, May 16, 2024
HomeWorldಭಾರತಕ್ಕೆ ಜಪಾನ್ ಯುವಕರು ಒಮ್ಮೆಯಾದರೂ ಭೇಟಿ ನೀಡಬೇಕು; ಪ್ರಧಾನಿ ಮೋದಿ ಆಹ್ವಾನ

ಭಾರತಕ್ಕೆ ಜಪಾನ್ ಯುವಕರು ಒಮ್ಮೆಯಾದರೂ ಭೇಟಿ ನೀಡಬೇಕು; ಪ್ರಧಾನಿ ಮೋದಿ ಆಹ್ವಾನ

spot_img
- Advertisement -
- Advertisement -

ಜಪಾನ್: ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸವನ್ನು ಕೈಗೊಂಡಿದ್ದು, ಅವರು ಸೋಮವಾರದಂದು ಟೋಕಿಯೋದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ತಂತ್ರಜ್ಞಾನ ಮತ್ತು ಪ್ರತಿಭೆ ಕೇಂದ್ರಿತ ಭವಿಷ್ಯದ ಬಗ್ಗೆ ಭಾರತವು ಹೆಚ್ಚು ಆಶಾವಾದಿಯಾಗಿದೆ. ಜಪಾನ್ ಯುವಕರು ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಪಾನಿಗರಿಗೆ ಆಹ್ವಾನ ನೀಡಿದರು.

ಮೋದಿ ಕಾರ್ಯಕ್ರಮದ ಕುರಿತು ಭಾರತೀಯ ವಲಸಿಗರಲ್ಲಿ ಅಪಾರ ಉತ್ಸಾಹವಿತ್ತು ಮತ್ತು ಅವರು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ಮೋದಿ ಮತ್ತು ಜೈ ಶ್ರೀ ರಾಮ್’ ಘೋಷಣೆಗಳು ಸಭಾಂಗಣದಲ್ಲಿ ಪ್ರತಿಧ್ವನಿಸಿತು. ನಂತರ ಮಾತು ಮುಂದುವರಿಸಿದ ಪ್ರಧಾನಿ ಮೋದಿ, ಜಪಾನಿಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ವಿಪರೀತ ಪ್ರೀತಿ ಸಿಗುತ್ತದೆ. ನಿಮ್ಮಲ್ಲಿ ಕೆಲವರು ವರ್ಷಗಳಿಂದ ಜಪಾನ್‌ನಲ್ಲಿ ನೆಲೆಸಿದ್ದೀರಿ. ಈ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದರೂ, ಭಾರತೀಯ ಸಂಸ್ಕೃತಿ ಮತ್ತು ಭಾಷೆಯ ಬಗೆಗಿನ ಪ್ರೀತಿ ಸದಾಕಾಲ ಹಾಗೆಯೇ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಯುವಕರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಬರಬೇಕು ಎಂದು ನಾನು ಈ ಮೂಲಕ ಆಸೆ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು. ಭಾರತೀಯ ಸಮುದಾಯದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಸ್ವಾಮಿ ವಿವೇಕಾನಂದರು ಜಪಾನ್‌ನಿಂದ ಪ್ರಭಾವಿತರಾಗಿದ ಭಾರತದ ಯುವಕರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಜಪಾನ್‌ಗೆ ಭೇಟಿ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು.   

- Advertisement -
spot_img

Latest News

error: Content is protected !!