Wednesday, June 24, 2026
Homeಕರಾವಳಿಬಂಟ್ವಾಳದ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ಪ್ರಯುಕ್ತ ಭಕ್ತರಿಂದ ತೀರ್ಥಸ್ನಾನ; ದೇಗುಲದಲ್ಲಿ ವಿಶೇಷ ಉತ್ಸವ

ಬಂಟ್ವಾಳದ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ಪ್ರಯುಕ್ತ ಭಕ್ತರಿಂದ ತೀರ್ಥಸ್ನಾನ; ದೇಗುಲದಲ್ಲಿ ವಿಶೇಷ ಉತ್ಸವ

- Advertisement -
- Advertisement -

ಬಂಟ್ವಾಳ : ಕರಾವಳಿಯ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ದೇಗುಲದಲ್ಲಿ ವಿಶೇಷ ಉತ್ಸವವು ನಡೆಯಿತು. ದೇಗುಲಕ್ಕೆ ಆಗಮಿಸಿದ ಭಕ್ತಾದಿಗಳು ವಿಶೇಷ ದಿನದ ಪ್ರಯುಕ್ತ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದರು. 

ದೇವಸ್ಥಾನದ ಶಿವ ಪಾರ್ವತಿ ದೇವಾಲಯದ ಪ್ರವೇಶದ ಮೊದಲು ಭಕ್ತಾಧಿಗಳು ಕಾರಿಂಜ ಕೆರೆಯಲ್ಲಿ ಬಾಗಿನ ಅರ್ಪಿಸಿ, ನಂತರದಲ್ಲಿ ತೀರ್ಥಸ್ನಾನ ಮಾಡಿದರು. 

ಆಟಿ ಅಮಾವಾಸ್ಯೆಯ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗೆ 3 ಗಂಟೆಯಿಂದ ಓಂಕಾರ ಫ್ರೆಂಡ್ಸ್ ಮಧ್ವ, ಓಂಕಾರ ಮಹಿಳಾ ಘಟಕ, ಓಂಕಾರ ಶ್ರೀ ಶಾರದಾ ಭಜನಾ ಮಂದಿರ ಬೆಂಗತ್ತೋಡಿ ಇವರ ವತಿಯಿಂದ ಹಾಳೆ ಮರದ ಕೆತ್ತೆಯ ಕಷಾ ವಿತರಣೆ ಮಾಡಲಾಯಿತು.

- Advertisement -

Latest News

error: Content is protected !!