Wednesday, June 24, 2026
Homeತಾಜಾ ಸುದ್ದಿ52 ದಿನಗಳ ಕಾಲ 1790 ಕಿ.ಮೀ. ಕ್ರಮಿಸಿ ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ

52 ದಿನಗಳ ಕಾಲ 1790 ಕಿ.ಮೀ. ಕ್ರಮಿಸಿ ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ

- Advertisement -
- Advertisement -

ಮಂಡ್ಯ: ಪಾರಿವಾಳಗಳ ರೇಸ್ ನಲ್ಲಿ ಭಾಗವಹಿಸಿದ್ದ ಪಾರಿವಾಳ ಮಾಲೀಕನನ್ನು ಹುಡುಕಿಕೊಂಡು 52 ದಿನ‌ಗಳ ಕಾಲ 1,790 ಕಿಲೋ ಮೀಟರ್ ಕ್ರಮಿಸಿ ದೆಹಲಿಯಿಂದ ಮಂಡ್ಯಕ್ಕೆ ಬಂದಿದೆ.

ಮಂಡ್ಯದ ಶ್ರೀಧರ್ ಎಂಬವರಿಗೆ ಸೇರಿದ ಅಭಿಮನ್ಯು ಹೆಸರಿನ ಒಂದು ವರ್ಷದ ವಯಸ್ಸಿನ ಪಾರಿವಾಳ ಈ ವಿಶೇಷ ದಾಖಲೆ ಮಾಡಿದ್ದು, ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ ನಿಂದ ಆಯೋಜಿಸಿದ್ದ ಡೆಲ್ಲಿ ರೇಸ್ ನಲ್ಲಿ ಭಾಗವಹಿಸಿತ್ತು.

ರೇಸ್ ನಲ್ಲಿ ಭಾಗವಹಿಸಿದ್ದ ಕರ್ನಾಟಕ ಮತ್ತು ತಮಿಳುನಾಡಿನ 22 ಪಾರಿವಾಳಗಳನ್ನು ಏಪ್ರಿಲ್ 5 ರಂದು ದೆಹಲಿಯಿಂದ ಹಾರಿಬಿಡಲಾಗಿತ್ತು.ಹಾರಿಬಿಟ್ಟ 22 ಪಾರಿವಾಳಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗಳಿಗೆ ವಾಪಸಾಗಿದ್ದು, ಆ ಪೈಕಿ ಅಭಿಮನ್ಯು ಅತಿ ಚಿಕ್ಕ ವಯಸ್ಸಿನ ಪಾರಿವಾಳವಾಗಿದೆ. ಅಲ್ಲದೇ ಮೊದಲ ರೇಸ್ ನಲ್ಲೇ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳ ಎಂಬ ದಾಖಲೆಯನ್ನೂ ಅಭಿಮನ್ಯು ಬರೆದಿದೆ.

- Advertisement -

Latest News

error: Content is protected !!