Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಮೀನು ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿ;  ಮೂವರಿಗೆ ಗಾಯ

ಮಂಗಳೂರು: ಮೀನು ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿ;  ಮೂವರಿಗೆ ಗಾಯ

- Advertisement -
- Advertisement -

ಮಂಗಳೂರು: ಮೀನು ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ  ಮೂವರಿಗೆ ಗಾಯಗಳಾಗಿರುವ ಘಟನೆ ಘಟನೆ ಜೆಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿ ಸಂಭವಿಸಿದೆ. ಚಾಲಕ ರತೀಶ್ (38) ಮತ್ತು ಇಬ್ಬರು ಪ್ರಯಾಣಿಕರಾದ ಶೈಲಜಾ (57) ಮತ್ತು ಶಾರದಾ (60) ಗಾಯಗೊಂಡವರು.


ಬೆಳಿಗ್ಗೆ 6 ಗಂಟೆ ಸುಮಾರಿಗೆ ಮೀನು ತುಂಬಿದ ಪಿಕಪ್ ಮಂಗಳೂರಿನಿಂದ ಕೇರಳದ ತಲಪಾಡಿ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಚಾಲಕನ ನಿರ್ಲಕ್ಷ್ಯದಿಂದಾಗಿ ವಾಹನವು ಸಮತೋಲನ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯಾಗಿದೆ.ಮೂವರನ್ನೂ ತಕ್ಷಣ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

- Advertisement -

Latest News

error: Content is protected !!