Thursday, May 2, 2024
Homeಕರಾವಳಿಬೆಳ್ತಂಗಡಿ : ಅಕ್ರಮವಾಗಿ ಪಿಕಪ್‌ ನಲ್ಲಿ ಅಡಿಕೆ ಸಾಗಾಟ: ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ಬಿತ್ತು ದಂಡ

ಬೆಳ್ತಂಗಡಿ : ಅಕ್ರಮವಾಗಿ ಪಿಕಪ್‌ ನಲ್ಲಿ ಅಡಿಕೆ ಸಾಗಾಟ: ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ಬಿತ್ತು ದಂಡ

spot_img
- Advertisement -
- Advertisement -

ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಸುಳಿದ ಅಡಿಕೆಯನ್ನು ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ಬಿಲ್/ ದಾಖಲೆಗಳಲ್ಲದೆ ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಿ ವಾಹನ ಚಾಲಕನಿಗೆ ದಂಡ ವಿಧಿಸಿದ್ದಾರೆ.

*ಪ್ರಕರಣದ ವಿವರ; ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಮತ್ತು ಸಿಬ್ಬಂದಿ ರೌಡ್ಸ್ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಸತ್ಯನಪಲ್ಕೆ ಸಿದ್ದಬೈಲು ಪರಾರಿ ಬಳಿ ಮಾ.22 ರಂದು ಸಂಜೆ 5:30 ರ ಸುಮಾರಿಗೆ ಮಹೇಂದ್ರ ಕಂಪನಿಯ KA-21-C-7020 ಸಂಖ್ಯೆಯ ವಾಹನವನ್ನು ನಿಲ್ಲಿಸಿದ್ದು.‌ಇದನ್ನು   ಪರಿಶೀಲನೆ ನಡೆಸಿದಾಗ ವಾಹನ ಕೆಟ್ಟು ಹೋಗಿದ್ದರಿಂದ ನಿಲ್ಲಿಸಿದಾಗಿ ಚಾಲಕ ಹೇಳಿದ್ದು ಅದರಂತೆ ವಾಹನದಲ್ಲಿ 200 ಕೆಜಿ ಸುಲಿದ ಒಣ ಅಡಕೆ ಸಾಗಾಟ ಮಾಡುತ್ತಿರುವುದಾಗಿ ವಾಹನ ಚಾಲಕ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ನಿವಾಸಿ ನಾಶಿಫ್(23) ಎಂಬಾತ ತಿಳಿಸಿದ್ದು. ದಾಖಲೆಗಳನ್ನು ಕೇಳಿದಾಗ ಸಾಗಾಟ ಮಾಡಲು ಯಾವುದೇ ಬಿಲ್/ದಾಖಲೆ ಮಾಡಿಕೊಂಡಿಲ್ಲ. ಈ ಅಡಕೆ ಕೊಕ್ಕಡದ ಪ್ರಕಾಶ್ ಭಟ್  ಎಂಬವರಿಂದ ಖರೀದಿಸಿ ಕಕ್ಕಿಂಜೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಚಾಲಕ ಮಾಹಿತಿ ನೀಡಿದ್ದಾನೆ‌. ನಂತರ ವಾಹನ ಮತ್ತು ಅಡಕೆಯನ್ನು ಧರ್ಮಸ್ಥಳ ಠಾಣೆಗೆ ತೆಗೆದುಕೊಂಡು ಬರಲು ಸೂಚಿಸಿದ್ದು ಅದರಂತೆ ನಾಶಿಫ್ ಇನ್ನೊಂದು ಪಿಕಪ್ ವಾಹನ ಸಂಖ್ಯೆ KA-21-A-2392 ವಾಹನದಲ್ಲಿ ಅಡಕೆ ಮತ್ತು ವಾಹನವನ್ನು ತೆಗೆದುಕೊಂಡು ಬಂದು ಪೊಲೀಸರಿಗೆ ಹಸ್ತಾಂತರ ಮಾಡಿದ್ದಾನೆ.

ವಾಹನ ಚಾಲಕನಿಗೆ ದಂಡ:ಈ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಎರಡು ಪಿಕಪ್ ವಾಹನ ಮತ್ತು ಸಾಗಾಟ ಮಾಡುತ್ತಿದ್ದ ಸುಳಿದ ಅಡಕೆಯನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಗೆ ಮುಂದಿನ ತನಿಖೆಗಾಗಿ ಹಸ್ತಾಂತ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದು ಅದರಂತೆ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಾ.23 ರಂದು ಯಾವುದೇ ಬಿಲ್ / ದಾಖಲೆಯಿಲ್ಲದೆ  ಅಡಿಕೆ ಸಾಗಾಟ ಮಾಡಿದ್ದ ನಾಶಿಫ್ ಗೆ 33,346/- ರೂಪಾಯಿ ದಂಡ ವಿಧಿಸಿದ್ದಾರೆ.

- Advertisement -
spot_img

Latest News

error: Content is protected !!