Wednesday, November 29, 2023
Homeತಾಜಾ ಸುದ್ದಿಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್ಐ ಎಚ್ಚರಿಕೆಯ ಬರಹ ವಿಚಾರ: ಸಂದರ್ಭ ಬಂದ್ರೆ ನಿಮ್ಮನ್ನ ನಾಶ ಮಾಡಿ...

ಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್ಐ ಎಚ್ಚರಿಕೆಯ ಬರಹ ವಿಚಾರ: ಸಂದರ್ಭ ಬಂದ್ರೆ ನಿಮ್ಮನ್ನ ನಾಶ ಮಾಡಿ ಭಾರತವನ್ನ ಉಳಿಸುತ್ತೇವೆ: ಸಿ.ಟಿ.ರವಿ

- Advertisement -
- Advertisement -

ಚಿಕ್ಕಮಗಳೂರು: ಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್ಐ ಬರಹಕ್ಕೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೆಂಡಾ ಮಂಡಲರಾಗಿದ್ದಾರೆ. ಪಿಎಫ್ಐ ನವರು ನೆಪಕ್ಕೆ ಮಾತ್ರ ಆರ್​ಎಸ್​ಎಸ್ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ಅವರ ಉದ್ದೇಶ ಇರೋದು ಭಾರತೀಯರು, ಭಾರತೀಯತೆ ಮೇಲೆ. ಅವರ ಯುದ್ಧದ ಉದ್ದೇಶ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡೋದು ಎಂದಿದ್ದಾರೆ.

ಪ್ರತಿಯೊಬ್ಬರು ರಾಷ್ಟ್ರೀಯತೆಯನ್ನ ಮೈ ಗೂಡಿಸಿಕೊಳ್ಳುವ ಮೂಲಕ ಅವರನ್ನ ಎದುರಿಸಬೇಕು. ನಿಮ್ಮ ದುಷ್ಟತನದ ಮೂಲಕ ಭಾರತೀಯರನ್ನ ನಾಶ ಮಾಡಿದ ಕಾಲ ಹೋಯ್ತು. ಈಗ ಅಂತಹ ಸಂದರ್ಭ ಬಂದ್ರೆ ನಿಮ್ಮನ್ನ ನಾಶ ಮಾಡಿ ಭಾರತವನ್ನ ಉಳಿಸುತ್ತೇವೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
spot_img

Latest News

error: Content is protected !!