Saturday, April 20, 2024
Homeತಾಜಾ ಸುದ್ದಿಜೆಡಿಎಸ್‌ನ 20 ಶಾಸಕರ ಜೊತೆ ಹೈದರಾಬಾದ್‌ಗೆ ತೆರಳಿದ ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್‌ನ 20 ಶಾಸಕರ ಜೊತೆ ಹೈದರಾಬಾದ್‌ಗೆ ತೆರಳಿದ ಹೆಚ್.ಡಿ.ಕುಮಾರಸ್ವಾಮಿ

spot_img
- Advertisement -
- Advertisement -

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು  ತಮ್ಮ ಜೆಡಿಎಸ್ ಪಕ್ಷದ 20 ಶಾಸಕರ ಜತೆ ಇಂದು ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ನವರಾತ್ರಿ ಸಂದರ್ಭದಲ್ಲಿ ನೂತನ ಪಕ್ಷ ಘೋಷಣೆ ಮಾಡುವುದಾಗಿ ಈ ಹಿಂದೆ ಘೋಷಿಸಿದಂತೆ ನಾಳೆ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಿಎಂ ಕೆಸಿಆರ್​ ಆಹ್ವಾನದ ಮೇರೆಗೆ HDK ತಂಡ ನಾಳೆ ಆ ಸಮಾರಂಭದಲ್ಲಿ ಭಾಗಿಯಾಗಲಿದೆ.

ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕೆ.ಸಿ.ಆರ್​ ಅವರು ಹೆಚ್‌ಡಿ ದೇವೇಗೌಡ ಮತ್ತು ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದರು. ಪಕ್ಷ ಸ್ಥಾಪನೆ ಬಗ್ಗೆಯೂ ಹೆಚ್‌ಡಿ ದೇವೇಗೌಡ ಮತ್ತು ಹೆಚ್‌ಡಿಕೆ ಜತೆ ಚರ್ಚಿಸಿದ್ದರು.

- Advertisement -
spot_img

Latest News

error: Content is protected !!