Friday, June 26, 2026
Homeಕರಾವಳಿವಿಟ್ಲ: ಯುವತಿಗೆ ವಂಚನೆ ಪ್ರಕರಣ- ಆರೋಪಿ ನಾಸೀರ್ ನಮ್ಮ ಕಾರ್ಯಕರ್ತನಲ್ಲ ಎಂದ ಪಿಎಪ್ಐ

ವಿಟ್ಲ: ಯುವತಿಗೆ ವಂಚನೆ ಪ್ರಕರಣ- ಆರೋಪಿ ನಾಸೀರ್ ನಮ್ಮ ಕಾರ್ಯಕರ್ತನಲ್ಲ ಎಂದ ಪಿಎಪ್ಐ

- Advertisement -
- Advertisement -

ವಿಟ್ಲ: ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಜತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಬೇರೆ ಯುವತಿ ಜತೆ ಮದುವೆಯಾಗಿರುವ ಆರೋಪ ಎದುರಿಸುತ್ತಿರುವ ನಾಸೀರ್ ಗೂ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ವಿಟ್ಲ ವಲಯಾಧ್ಯಕ್ಷ ಶಾಕೀರ್ ಅಳಕೆಮಜಲು ಸ್ಪಷ್ಟನೆ ನೀಡಿದ್ದಾರೆ‌.

ಯುವತಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ನಾಸೀರ್, ಪಿಎಪ್ಐ ಕಾರ್ಯಕರ್ತ ಎಂದು ಆರೋಪ ಮಾಡಿದ ವಿಚಾರ ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಆತನಿಗೂ ಹಾಗೂ ಸಂಘಟನೆಗೆ ಯಾವುದೇ ಸಂಬಂಧವಿಲ್ಲ ಎಂದು ಶಾಕೀರ್ ಅಳಕೆಮಜಲು ಸ್ಪಷ್ಟನೆ ನೀಡಿದ್ದು, ಇದೊಂದು ಕೌಟುಂಬಿಕ ವಿಷಯವಾಗಿದ್ದು, ಈ ಬಗ್ಗೆ ಕೆಲವು ದಿನಗಳ ಹಿಂದೆ ಈ ವಿವಾದವನ್ನು ರಾಜಿಮಾತುಕತೆಗಳ ಮೂಲಕ ಮುಗಿಸಲು ಕರೆ ಬಂದಿತ್ತು. ಇತ್ತಂಡದ ನಡುವೆ ಮಾತುಕತೆ ನಡೆಯುತ್ತಿದ್ದ ನಡುವೆಯೂ ಯುವಕ ಇನ್ನೊಬ್ಬಳು ಯುವತಿಯನ್ನು ಮದುವೆಯಾಗಿದ್ದಾನೆ. ಹುಡುಗನ ಬಗ್ಗೆ ಬೇಸತ್ತು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ವಿವಾದದಲ್ಲಿ ರಾಜಕೀಯವಾಗಿ ಬಳಸಲು ಪಿಎಪ್ ಐ ಹೆಸರನ್ನು ಬಳಸಿದ್ದಾರೆ. ಇದನ್ನು ಪಿಎಪ್ ಐ ಖಂಡಿಸುತ್ತದೆ. ಇದರ ವಿರುದ್ಧ ಪಿಎಪ್ ಐ ಕಾನೂನು ಹೋರಾಟ ನಡೆಸಲಿದೆ. ನಾವು ಎಂದಿಗೂ ಸಂತ್ರಸ್ಥೆಯ ಪರವಾಗಿ ನಿಲ್ಲುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ನಾಸೀರ್ ಎಂಬಾತ ವಿರುದ್ಧ ಮಾಣಿ ಸಮೀಪದ ಯುವತಿ ದೂರು ನೀಡಿದ್ದಾಳೆ. ನಾಸೀರ್ ನನ್ನನ್ನು 11 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ನಡುವೆಯೂ 5 ವರ್ಷದ ಮೊದಲು ತನ್ನ ತಂಗಿಯ ಮದುವೆಗೆಂದು ಹೇಳಿ ನನ್ನಿಂದ 60 ಸಾವಿರ ರೂ. ಹಾಗೂ 40 ಸಾವಿರ ರೂ. ಮೊತ್ತದ ಚಿನ್ನವನ್ನು ಪಡೆದು ಹಿಂತಿರುಗಿಸರಲಿಲ್ಲ. ನನ್ನನ್ನು ವಿವಾಹವಾಗುವುದಾಗಿ ನಂಬಿಸಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿದ ಕುರಿತು ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾನೆ. ಈ ಬಗ್ಗೆ ನಾನು ಯಾರಲ್ಲಿಯೂ ಈ ವಿಚಾರ ತಿಳಿಸಿರುವುದಿಲ್ಲ. ನಂತರ ವಿವಾಹವಾಗುತ್ತೇನೆ ಎಂದು ನಂಬಿಸಿ ಮತ್ತೆ ಎರಡು ಬಾರಿ ದೈಹಿಕ ಸಂಪರ್ಕ ಬೆಳೆಸಿರುತ್ತಾನೆ. ಮದುವೆಯಾಗುತ್ತಾನೇ ಎಂಬ ನಂಬಿಕೆಯಿಂದ ನಾನು ಯುವಕನ ಬಗ್ಗೆ ಯಾರಲ್ಲಿಯೂ ಹೇಳದೇ ಮುಚ್ಚಿಟ್ಟಿದ್ದು ಎಂದು ಹೇಳಿದ್ದಾಳೆ.

ಆದರೆ ಈ ದಿನ ಸೋಮವಾರ ಪಾಣೆಮಂಗಳೂರಿನ ಮದುವೆ ಹಾಲ್ ನಲ್ಲಿ ಬೇರೆ ಹುಡುಗಿ ಜತೆ ಮದುವೆ ಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. 11 ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ ಮೂರು ಬಾರಿ ದೈಹಿಕ ಸಂಪರ್ಕ ಮಾಡಿ ಈ ದಿನ ಆತ ಬೇರೆ ಯುವತಿ ಜತೆ ವಿವಾಹ ಆಗಿದ್ದರಿಂದ ಮನೆಯವರಿಗೆ ತಿಳಿಸಿದ್ದೇನೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಯುವತಿ ಹೆತ್ತವರೊಂದಿಗೆ ಬಂದು ವಿಟ್ಲ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!