Saturday, June 6, 2026
Homeಕರಾವಳಿಮಂಗಳೂರು: ಉಳಾಯಿಬೆಟ್ಟು ಗ್ರಾ.ಪಂ‌ ಮಾಜಿ ಅಧ್ಯಕ್ಷ ಯೂಸುಫ್ ಕೊಲೆ ಯತ್ನ

ಮಂಗಳೂರು: ಉಳಾಯಿಬೆಟ್ಟು ಗ್ರಾ.ಪಂ‌ ಮಾಜಿ ಅಧ್ಯಕ್ಷ ಯೂಸುಫ್ ಕೊಲೆ ಯತ್ನ

- Advertisement -
- Advertisement -

ಮಂಗಳೂರು: ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಯೂಸುಫ್ ಅವರ ಕೊಲೆ ಯತ್ನ ಮಾಡಿರುವ ಘಟನೆ ಕುಲಶೇಖರ ಬಳಿ ನಡೆದಿದೆ.

ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಉಳಾಯಿಬೆಟ್ಟು ನಿವಾಸಿ ಯೂಸುಫ್‌ ಅವರು ಕಾರಿನಲ್ಲಿ ಉಳಾಯಿಬೆಟ್ಟಿಗೆ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಕೊಲೆ ಯತ್ನ ನಡೆಸಿದ್ದಾರೆ.

ಯೂಸುಫ್‌ ಅವರು ಕಾರಿನಲ್ಲಿ ನಿನ್ನೆ ರಾತ್ರಿ ತೆರಳುತ್ತಿದ್ದ ಸಂದರ್ಭ ಬೈಕ್‌ ಒಂದು ಬಂದು ಡಿಕ್ಕಿ ಹೊಡೆದಿದ್ದು ಯೂಸುಫ್‌ ಅವರು ಕೆಳಗೆ ಇಳಿದ ಬಳಿಕ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳ ತಂಡ ತಲವಾರಿನಿಂದ ಹಲ್ಲೆ ನಡೆಸಿದ್ದು ಕಾರಿನ ಗಾಜು ಒಡೆದು ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡ ಯೂಸುಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!