Friday, April 26, 2024
Homeಉದ್ಯಮತಿಂಗಳ ಬಿಡುವಿನ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಸಾರ್ವಕಾಲಿಕ ಗರಿಷ್ಠ ದರ ದಾಟುವತ್ತ...

ತಿಂಗಳ ಬಿಡುವಿನ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಸಾರ್ವಕಾಲಿಕ ಗರಿಷ್ಠ ದರ ದಾಟುವತ್ತ ಪೆಟ್ರೋಲ್ !

spot_img
- Advertisement -
- Advertisement -

ನವದೆಹಲಿ: ತಿಂಗಳ ಬಳಿಕ ವಾಹನ ಸವಾರರಿಗೆ ಮತ್ತೆ ತೈಲ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಇಂದು ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.

ಕಳೆದ 29 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣದೆ ಸ್ಥಿರತೆ ಕಾಯ್ದುಕೊಂಡಿದ್ದು, ಇಂದು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಜನ ಜನಸಾಮಾನ್ಯರು ತತ್ತರಿಸುವಂತಾಗಿದೆ. ಇಂದು ಪೆಟ್ರೋಲ್ ಬೆಲೆಯಲ್ಲಿ 26 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲಿ 25 ಪೈಸೆ ಏರಿಕೆಯಾಗಿದೆ.

ಭಾರತೀಯ ತೈಲ ಕಂಪನಿಗಳ ಪ್ರಕಟಣೆಯ ಪ್ರಕಾರ ದೇಶದ ವಿವಿಧ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಇಲ್ಲಿದೆ..

ಬೆಂಗಳೂರು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.79 ರೂಪಾಯಿ, ಡೀಸೆಲ್ ಪ್ರತಿ ಲೀಟರ್ ಬೆಲೆ 78.59 ರೂಪಾಯಿ. ಎಲ್ ಪಿಜಿ (ಅಡುಗೆ) ಸಿಲಿಂಡರ್ ಬೆಲೆ 697 ರೂಪಾಯಿ.
ದೆಹಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 83.71 ರೂಪಾಯಿ, ಡೀಸೆಲ್ ಪ್ರತಿ ಲೀಟರ್ ಬೆಲೆ 73.87 ರೂಪಾಯಿ.
ಮುಂಬೈ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90.34 ರೂಪಾಯಿ, ಡೀಸೆಲ್ ಪ್ರತಿ ಲೀಟರ್ ಬೆಲೆ 80.51 ರೂಪಾಯಿ.
ಚೆನ್ನೈ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.51 ರೂಪಾಯಿ, ಡೀಸೆಲ್ ಪ್ರತಿ ಲೀಟರ್ ಬೆಲೆ 79.21 ರೂಪಾಯಿ.
ಕೋಲ್ಕತಾ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 85.19 ರೂಪಾಯಿ, ಡೀಸೆಲ್ ಪ್ರತಿ ಲೀಟರ್ ಬೆಲೆ 77.24 ರೂಪಾಯಿ.

- Advertisement -
spot_img

Latest News

error: Content is protected !!