Thursday, June 4, 2026
Homeತಾಜಾ ಸುದ್ದಿದೇಶದಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ...!

ದೇಶದಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ…!

- Advertisement -
- Advertisement -

ನವದೆಹಲಿ: ದೇಶದಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಕಳೆದ 9 ದಿನಗಳಲ್ಲಿ 8 ಬಾರಿ ದರಗಳು ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಬುಧವಾರ ನವದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ 80 ಪೈಸೆ ಏರಿಕೆಯಾಗಿದೆ. ಇದರಿಂದಾಗಿ ಲೀಟರ್ ಪೆಟ್ರೋಲ್‌ ದರ 101.01 ರೂ. ಆಗಿದೆ. ಡೀಸೆಲ್ ದರ 92.27 ರೂ. ಆಗಿದೆ.

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 85 ಪೈಸೆ, ಡೀಸೆಲ್ ಬೆಲೆ ಲೀಟರ್‌ಗೆ 85 ಪೈಸೆ ಏರಿಕೆ ಕಂಡಿದೆ. 1 ಲೀಟರ್ ಪೆಟ್ರೋಲ್ ದರ 115.88 ರೂ. ಮತ್ತು ಡೀಸೆಲ್ ದರ 100.10 ರೂ..

ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆ ಆಧರಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತದೆ. ಆದ್ದರಿಂದ ರಾಜ್ಯದಿಂದ ರಾಜ್ಯಕ್ಕೆ ದರಗಳಲ್ಲಿ ವ್ಯತ್ಯಾಸ ಇರುತ್ತದೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ನಾಲ್ಕೂವರೆ ತಿಂಗಳ ಬಳಿಕ ಮಾರ್ಚ್ 22ರಂದು ಏರಿಕೆಯಾಗಿತ್ತು. ಬಳಿಕ 9 ದಿನಗಳಲ್ಲಿ 8 ಬಾರಿ ತೈಲ ದರಗಳು ಏರಿಕೆ ಕಂಡಿವೆ. ಒಟ್ಟಾರೆ 5 ರೂ. ಏರಿಕೆಯಾದಂತೆ ಆಗಿದೆ.

- Advertisement -

Latest News

error: Content is protected !!