Tuesday, April 23, 2024
Homeಕರಾವಳಿಉಡುಪಿಉಡುಪಿಯ ಮಠದಬೆಟ್ಟುವನಲ್ಲಿ ಕಟ್ಟಡದಿಂದ ಹಾರಿ ಪೆಟ್ರೋಲ್ ಬಂಕ್ ಮಾಲೀಕ ಆತ್ಮಹತ್ಯೆ

ಉಡುಪಿಯ ಮಠದಬೆಟ್ಟುವನಲ್ಲಿ ಕಟ್ಟಡದಿಂದ ಹಾರಿ ಪೆಟ್ರೋಲ್ ಬಂಕ್ ಮಾಲೀಕ ಆತ್ಮಹತ್ಯೆ

spot_img
- Advertisement -
- Advertisement -

ಉಡುಪಿ : ಕಟ್ಟಡದ ಮೇಲಿನಿಂದ ಹಾರಿ ಪೆಟ್ರೋಲ್ ಬಂಕ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಮಠದಬೆಟ್ಟು ಎಂಬಲ್ಲಿ ನಿನ್ನೆ ನಡೆದಿದೆ.

ಉತ್ತಮ ನಾಯಕ್ (30 ) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಆತ್ರಾಡಿಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರಾಗಿರುವ ಉತ್ತಮ್ ನಾಯಕ ಅವರು ನಾಲ್ಕೈದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.

ಅವರ ಪತ್ನಿ ಮುಂಬೈನಲ್ಲಿ ನೆಲೆಸಿದ್ದರೆ ಉತ್ತಮ ನಾಯಕ್ ಅವರು ಮಠದ ಬೆಟ್ಟುವಿನಲ್ಲಿರುವ ಫ್ಯ್ಲಾಟ್ ನ 3ನೇ ಮಹಡಿಯಲ್ಲಿ ವಾಸವಾಗಿದ್ದರು. ಆದರೆ, ನಿನ್ನೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!