Wednesday, July 15, 2026
Homeಕರಾವಳಿಬಂಟ್ವಾಳ;ಪೆಟ್ರೋಲ್ ಬಂಕ್ ಮ್ಯಾನೇಜರ್ ಹೃದಯಘಾತದಿಂದ ಸಾವು

ಬಂಟ್ವಾಳ;ಪೆಟ್ರೋಲ್ ಬಂಕ್ ಮ್ಯಾನೇಜರ್ ಹೃದಯಘಾತದಿಂದ ಸಾವು

- Advertisement -
- Advertisement -

ಬಂಟ್ವಾಳ; ಪೆಟ್ರೋಲ್ ಬಂಕ್ ಮ್ಯಾನೇಜರ್ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಬಿಸಿರೋಡಿನ ಸರ್ಕಲ್ ಬಳಿಯ ಪೆಲತ್ತಿಮಾರ್ ನಿವಾಸಿ ಪುರುಷೋತ್ತಮ ಮೃತ ವ್ಯಕ್ತಿ. ಕೃಷಿಕನಾಗಿದ್ದುಕೊಂಡು ಬಿಸಿರೋಡಿನ ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನ ಪುರುಷಣ್ಣ ಎಂದೇ ಹೆಸರುವಾಸಿಯಾದ ಇವರು ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿದ್ದರು. ಬಿಸಿರೋಡಿನ ಗುರುಕೃಪ ಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ಮಾಡುತ್ತಿದ್ದರು.

ಶನಿವಾರ ರಾತ್ರಿ ತಡರಾತ್ರಿ ಸುಮಾರು ಒಂದು ಗಂಟೆ ವೇಳೆ ಇವರಿಗೆ ಹೃದಯ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!