Thursday, June 4, 2026
Homeಕರಾವಳಿಬಂಟ್ವಾಳ:ಮನೆಯ ಅಂಗಳದಲ್ಲಿ ಮೆಷಿನ್ ನಲ್ಲಿ ಹುಲ್ಲು ಹೆರಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

ಬಂಟ್ವಾಳ:ಮನೆಯ ಅಂಗಳದಲ್ಲಿ ಮೆಷಿನ್ ನಲ್ಲಿ ಹುಲ್ಲು ಹೆರಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

- Advertisement -
- Advertisement -

ಬಂಟ್ವಾಳ: ಮನೆಯ ಅಂಗಳದಲ್ಲಿ ಮೆಷಿನ್ ನಲ್ಲಿ ಹುಲ್ಲು ಹೆರಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ನಡೆದಿದೆ.ಬಾಗಲಕೋಟ ನಿವಾಸಿ ಯಮನಪ್ಪ (38) ಮೃತ ವ್ಯಕ್ತಿ.

ಗುಡ್ಡೆಯಂಗಡಿ ನಿವಾಸಿ ಸೈಪುದ್ದೀನ್ ಎಂಬವರ ಮನೆಯ ಅಂಗಳದಲ್ಲಿ ಮೆಷಿನ್ ಮೂಲಕ ಹುಲ್ಲು ಹೆರಿಯುವಾಗಳೆ ಘಟನೆ ನಡೆದಿದೆ.ಅಂಗಳದಲ್ಲಿ ಬೋರ್ ವೆಲ್ ಒಂದಿದ್ದು, ಇದರೊಳಗಿರುವ ಪಂಪ್ ಗೆ ನೀಡಲಾದ ವಿದ್ಯುತ್ ಸಂಪರ್ಕದ ವೈರನ್ನು ಕೆಲಸದ ವೇಳೆ ಗೋಚರಕ್ಕೆ ಬಾರದೆ ಕತ್ತರಿಸಿದ್ದಾರೆ. ಆವೇಳೆ ವಿದ್ಯುತ್ ಹರಿದು ಈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಯಮನಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ.ರಾಮಕೃಷ್ಣ ಅವರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!