- Advertisement -
![]()
- Advertisement -
ಹೊಸದಿಲ್ಲಿ: ಭಾರತದಲ್ಲಿ ಸತತ ಒಂಬತ್ತನೇ ದಿನವೂ ತೈಲದರದಲ್ಲಿ ಏರಿಕೆ ಕಂಡಿದೆ.ಮಾರಕ ಕೋವಿಡ್-19 ಲಾಕ್ ಡೌನ್ ನಿಂದ ಕಂಗೆಟ್ಟಿರುವ ಗ್ರಾಹಕರಿಗೆ ಈ ಸತತ ದರ ಏರಿಕೆ ಬೆಳವಣಿಗೆ ಆಘಾತ ನೀಡಿದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಭಾರತದಲ್ಲಿ ಸತತವಾಗಿ 9 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ನವದೆಹಲಿಯಲ್ಲಿಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 76.26 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 74.62 ರು ನಷ್ಟಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ 78.73 ರೂ. ಆಗಿದೆ. ಜೂನ್ ಆರರಂದು 73.55 ರೂ ಆಗಿದ್ದ ಪೆಟ್ರೋಲ್ ದರ ಇಂದು 78.73 ರೂ ಆಗಿದೆ. ಡೀಸೆಲ್ ದರದಲ್ಲಿ ಇಂದು 61 ಪೈಸೆ ಏರಿಕೆಯಾಗಿದ್ದು, 70.39 ರೂ. ಗೆ ತಲುಪಿದೆ. ಜೂನ್ ಆರರಂದು ಡೀಸೆಲ್ ದರ 65.96 ರೂ. ರಲ್ಲಿತ್ತು.
- Advertisement -


