Sunday, June 7, 2026
Homeತಾಜಾ ಸುದ್ದಿಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಕೊಲೆ ಮಾಡಿದ- ಶವವನ್ನು ಮನೆಯಲ್ಲೇ ಹೂತುಹಾಕಿದ ಭೂಪ!…

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಕೊಲೆ ಮಾಡಿದ- ಶವವನ್ನು ಮನೆಯಲ್ಲೇ ಹೂತುಹಾಕಿದ ಭೂಪ!…

- Advertisement -
- Advertisement -

ತುಮಕೂರು:ಇಲ್ಲಿನ ಮಧುಗಿರಿ ತಾಲೂಕಿನ ಹೊಸಇಟಕಲೋಟಿ ಗ್ರಾಮದಲ್ಲಿ ಕುಟುಂಬಸ್ಥರ ವಿರೋಧದ ನಡುವೆ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದ ವ್ಯಕ್ತಿ ನಂತರ ಆಕೆಯನ್ನು ಕೊಲೆ ಮಾಡಿ ಮನೆಯಲ್ಲೇ ಹೂತುಹಾಕಿರುವ ಘಟನೆ ವರದಿಯಾಗಿದೆ. ಆರೋಪಿ ಗಂಡ ತಲೆಮರೆಸಿಕೊಂಡಿದ್ದಾನೆ. ಪೊಲೀಸ್ ತಪಾಸಣೆಯ ವೇಳೆ ಮನೆಯಲ್ಲೇ ಬಾಲಕಿಯ ಶವ ಪತ್ತೆಯಾಗಿದೆ.

ಅಪ್ರಾಪ್ತ ಬಾಲಕಿಗೆ 9 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ರಮ್ಯಾ ಮನೆಯವರ ವಿರೋಧದ ಮಧ್ಯೆಯೂ ಆಕೆಯನ್ನ ಅದೇ ಗ್ರಾಮದ ನರಸಿಂಹಮೂರ್ತಿ ಬಲವಂತವಾಗಿ ಮದುವೆಯಾಗಿದ್ದ. ಆಕೆಯ ಕುಟುಂಬದವರು ಮದುವೆಗೆ ವಿರೋಧಿಸಿದ್ದರೂ ಅಪ್ರಾಪ್ತಳ ಮದುವೆ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಈಗ ಬಾಲಕಿಯ ಹತ್ಯೆಯ ಕಾರಣ ತಿಳಿದುಬಂದಿಲ್ಲ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!