Friday, May 3, 2024
Homeಜ್ಯೋತಿಷ್ಯಗುರುವಾರದ ನಿತ್ಯ ಭವಿಷ್ಯ: ಈ ದಿನ ಯಾರ ಮೇಲಿದೆ ರಾಯರ ದಯೆ?

ಗುರುವಾರದ ನಿತ್ಯ ಭವಿಷ್ಯ: ಈ ದಿನ ಯಾರ ಮೇಲಿದೆ ರಾಯರ ದಯೆ?

spot_img
- Advertisement -
- Advertisement -

ಮೇಷ ರಾಶಿ:ದಿಢೀರನೇ ಮುಂದೇನು ಎಂಬ ಪ್ರಶ್ನೆ ನಿಮ್ಮೆದುರು ಕಾಡುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಹೊಣೆಯು ಹೆಚ್ಚಾಗುತ್ತದೆ. ಇದನ್ನು ನಿರ್ವಹಿಸುವುದಕ್ಕೆ ಸಾಧ್ಯವೇ ಎಂಬ ಅನುಮಾನ ಮೂಡುತ್ತದೆ.

ವೃಷಭ ರಾಶಿ: ಯಾವುದೇ ಕೆಲಸವನ್ನು ಸಣ್ಣದು ಅಥವಾ ಅದರಿಂದ ಬರುವ ಆದಾಯ ಕಡಿಮೆ ಎಂದು ನಿರ್ಲಕ್ಷ್ಯ ಮಾಡದಿರಿ. ತುಂಬ ಸಣ್ಣ ಕೆಲಸಗಳ ಮೂಲಕವೇ ನಿಮ್ಮ ಪ್ರಭಾವ ಹೆಚ್ಚಿಸುವಂಥ ದಿನ ಇದು.

ಮಿಥುನ ರಾಶಿ: ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ವಿಸ್ತರಣೆ ಮಾಡುವ ಸಲುವಾಗಿ ಸಾಲ ಮಾಡುವ ಸಾಧ್ಯತೆ ಇದೆ. ಸಂಬಂಧ ಸುಧಾರಿಸುವ ಸಲುವಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ.

ಕರ್ಕಾಟಕ ರಾಶಿ: ವೈದ್ಯಕೀಯ ವೃತ್ತಿಯಲ್ಲಿ ಇರುವವರು ಅವಮಾನಗಳನ್ನು ಎದುರಿಸುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ಸಿಂಹ ರಾಶಿ: ಮನೆಯ ಸಲುವಾಗಿ ಗೃಹಾಲಂಕಾರ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಸಂಗಾತಿಯ ಜತೆಗೆ ಅತಿ ಮುಖ್ಯವಾದ ವಿಷಯಗಳನ್ನು ಚರ್ಚೆ ಮಾಡಲಿದ್ದೀರಿ.

ಕನ್ಯಾ ರಾಶಿ: ಏನನ್ನೂ ನಿರ್ಧಾರಿತ ಧ್ವನಿಯಲ್ಲಿ ಹೇಳಲಾಗದ ಸಂದಿಗ್ಧ ಸ್ಥಿತಿ ನಿಮ್ಮದಾಗಿರುತ್ತದೆ. ಒಮ್ಮೆಲೆ ಹಲವರು ನಿಮ್ಮ ತೀರ್ಮಾನವನ್ನು ಪ್ರಶ್ನಿಸುತ್ತಿದ್ದರೂ ಗಟ್ಟಿಯಾಗಿ ನಿಲ್ಲುವಂಥ ಮನೋಬಲ ಅಗತ್ಯ ಇದೆ.

ತುಲಾ ರಾಶಿ: ವಸ್ತ್ರಾಭರಣಗಳ ಖರೀದಿಗಾಗಿ ಸಾಲ ಮಾಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್ ಮೂಲಕ ವಿಪರೀತ ಹಣವನ್ನು ಬಳಸಿಕೊಳ್ಳಲಿದ್ದೀರಿ.

ವೃಶ್ಚಿಕ ರಾಶಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಮಹತ್ತರವಾದ ಜವಾಬ್ದಾರಿ ಹೆಗಲೇರುವ ಸಾಧ್ಯತೆ ಇದೆ. ಜ್ಯೋತಿಷಿಗಳು, ಅಧ್ಯಾತ್ಮ ಚಿಂತಕರಿಗೆ ಸಾಮಾಜಿಕ ಮನ್ನಣೆ ದೊರೆಯುತ್ತದೆ.

ಧನಸ್ಸು ರಾಶಿ: ನಿಮ್ಮ ಮೂಲಕ ಇತರರಿಗೆ ಸಹಾಯ ಆಗಲಿದೆ. ಕೆಲಸ ಕೊಡಿಸುವುದು ಅಥವಾ ಹಣಕಾಸಿನ ನೆರವು ದೊರಕಿಸುವ ಸಾಧ್ಯತೆ ಇದೆ.

ಮಕರ ರಾಶಿ: ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪ್ರೇಮಿಗಳು ಮನೆಯಲ್ಲಿ ಮದುವೆ ಪ್ರಸ್ತಾವ ಮಾಡುವ ಸಾಧ್ಯತೆ ಇದೆ. ಇನ್ನು ಸಂತಾನ ಅಪೇಕ್ಷಿತರು ಶುಭ ಸುದ್ದಿ ಕೇಳುವ ಯೋಗ ಇದೆ.

ಕುಂಭ ರಾಶಿ: ಹೂಡಿಕೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸ್ನೇಹಿತರ ಜತೆಗೆ ಗಂಭೀರವಾದ ಚರ್ಚೆ ಮಾಡಲಿದ್ದೀರಿ. ಇತರರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ.

ಮೀನ ರಾಶಿ: ನಿಮ್ಮಿಂದ ಇತರರಿಗೆ ವಿಪರೀತ ನಿರೀಕ್ಷೆ ಹೆಚ್ಚಾಗಲಿದೆ. ಇದನ್ನು ನಿರ್ವಹಿಸಲು ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ.


- Advertisement -
spot_img

Latest News

error: Content is protected !!