Wednesday, June 26, 2024
Homeಕರಾವಳಿಉಡುಪಿಬಸ್ ನಲ್ಲಿ ಕಾಲೇಜು ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿ ಚಾಕು‌ ಇರಿತ

ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿ ಚಾಕು‌ ಇರಿತ

spot_img
- Advertisement -
- Advertisement -

ಮಡಿಕೇರಿ: ಕಾಲೇಜು ಯುವತಿ ಜೊತೆ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸಿ ಚಾಕುವಿನಿಂದ ಹಲ್ಲೆ ಮಾಡಿರುವ ಆರೋಪ ವ್ಯಕ್ತವಾಗಿದೆ.

ಬಸ್ಸಿನಲ್ಲಿ ಕಾಲೇಜು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪ ಬೊಳ್ಳಾರ್ಪಂಡ ಪೊನ್ನಪ್ಪ (62) ಎಂಬ ವ್ಯಕ್ತಿಯ ವಿರುದ್ಧ ಕೇಳಿ ಬಂದಿದೆ

19 ವರ್ಷದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ ತೋರಿಸಿದ್ದು, ಬಸ್ಸಿನಲ್ಲಿ ವಿದ್ಯಾರ್ಥಿನಿಯ ಅಂಗಾಂಗ ಸ್ಪರ್ಷಿಸಿದ್ದಾನೆ ಎಂದು ಹೇಳಲಾಗಿದೆ.

ಈ ವೇಳೆ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಕೂಗಿಕೊಂಡಾಗ ಆರೋಪಿ ಪೊನ್ನಪ್ಪ ಪರಾರಿಯಾಗಲೆತ್ನಿಸಿದ್ದು ವಿದ್ಯಾರ್ಥಿನಿ ಹಿಡಿಯಲು ಯತ್ನಿಸಿದ್ದಾಳೆ.

ಆಗ ಪೊನ್ನಪ್ಪ ವಿದ್ಯಾರ್ಥಿನಿಗೆ ಚಾಕುವಿನಿಂದ ಚುಚ್ಚಿದ್ದು, ಕೈ ಬೆರಳುಗಳಿಗೆ ಗಾಯವಾಗಿದೆ.

ಗಾಯಾಳು ವಿದ್ಯಾರ್ಥಿನಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗಿದ್ದು, ಆರೋಪಿಗೆ ಸಾರ್ವಜನಿಕರು ಥಳಿಸಿದ್ದಾರೆ.

ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಪೊನ್ನಪ್ಪ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

- Advertisement -
spot_img

Latest News

error: Content is protected !!