Thursday, June 4, 2026
HomeUncategorizedನವದೆಹಲಿ: ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಾತನ ಹೊಟ್ಟೆಯಲ್ಲಿತ್ತು ಸೆಂಟ್ ಬಾಟಲಿ; ಯುವಕನ ಹುಚ್ಚಾಟಕ್ಕೆ ವೈದ್ಯರು ಸುಸ್ತು

ನವದೆಹಲಿ: ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಾತನ ಹೊಟ್ಟೆಯಲ್ಲಿತ್ತು ಸೆಂಟ್ ಬಾಟಲಿ; ಯುವಕನ ಹುಚ್ಚಾಟಕ್ಕೆ ವೈದ್ಯರು ಸುಸ್ತು

- Advertisement -
- Advertisement -

ನವದೆಹಲಿ: ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ಹೊಟ್ಟೆಯಲ್ಲಿ ಸೆಂಟ್ ಬಾಟಲಿ(ಡಿಯೋಡರೆಂಟ್) ಪತ್ತೆಯಾಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಕಿಬ್ಬೊಟ್ಟೆ ನೋವಿನ ಕಾರಣದಿಂದ ನರಳುತ್ತಿದ್ದ ಯುವಕನೊಬ್ಬ ದೆಹಲಿಯ ಬುರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ.  ಈ ವೇಳೆ ಎಲ್ಲಾ ಟೆಸ್ಟ್‌ ನಡೆಸಿದಾಗ ಆತನ ಹೊಟ್ಟೆಯಲ್ಲಿ 5 ಇಂಚು ಉದ್ದದ ಬಾಟಲಿಯನ್ನು ಹೊಟ್ಟೆಯಲ್ಲಿ ಕಂಡು ವೈದ್ಯರು ಶಾಕ್ ಆಗಿದ್ದಾರೆ. ಬಳಿಕ, ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಬಾಟಲಿಯನ್ನು ತೆಗೆದಿದ್ದಾರೆ ಮತ್ತು ರೋಗಿಯ ಅನ್ನನಾಳವನ್ನು ಸಹ ಎರಡು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯಲ್ಲಿ ಸರಿಪಡಿಸಿದ್ದಾರೆ.

ಡಿಯೋಡ್ರೆಂಟ್ ಬಾಟಲಿಯು ಸುಮಾರು 20 ದಿನಗಳ ಹಿಂದೆ ಗುದನಾಳದ ಮೂಲಕ ಆತನ ದೇಹ ಪ್ರವೇಶಿಸಿದೆ ಮತ್ತು ಅಂದಿನಿಂದ ಆ ವ್ಯಕ್ತಿಯು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದ ಎಂದು ವೈದ್ಯರು ಹೇಳಿದ್ದಾರೆ. ಯುವಕ ಹುಚ್ಚಾಟದಿಂದ ಗುದನಾಳದ ಮೂಲಕ ಬಾಟಲಿಯಲ್ಲಿ ಹೊಟ್ಟೆಗೆ ತಳ್ಳಿದ್ದ ಎನ್ನಲಾಗಿದೆ.

ಕಳೆದ ಇಪ್ಪತ್ತು ದಿನಗಳಿಂದ ಈ ವ್ಯಕ್ತಿಯು ತನ್ನ ಹೊಟ್ಟೆಯೊಳಗೆ ಬಾಟಲಿಯನ್ನು ಇಟ್ಟುಕೊಂಡಿದ್ದ ಎನ್ನಲಾಗಿದ್ದು ಮತ್ತು ಕಳೆದ ಕೆಲವು ದಿನಗಳಿಂದ ವಾಶ್ ರೂಂಗೆ ಹೋಗಲು ಎನ್ನಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಇದೀಗ ಯುವಕ ಪುನರ್ಜನ್ಮ ಪಡೆದಿದ್ದಾನೆ.

- Advertisement -

Latest News

error: Content is protected !!