- Advertisement -
![]()
- Advertisement -
ಮಂಗಳೂರು : 2024ರ ಮಕರ ಸಂಕ್ರಮಣ ವೇಳೆಗೆ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಟ್ರಸ್ಟ್‌ನ ಕೆಲಸ ಪೂರ್ಣವಾದ ಬಳಿಕ ಮುಂದಿನ ಹಂತದಲ್ಲಿ ಗ್ರಾಮಗಳನ್ನು ರಾಮರಾಜ್ಯದ ಹೆಸರಿನಲ್ಲಿ ದತ್ತು ತೆಗೆದುಕೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ.ಒಂದು ಅಥವಾ ಪಂಚ ವರ್ಷದ ಯೋಜನೆ ಹಾಕಿಕೊಂಡು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಾಮರಾಜ್ಯ ನಿರ್ಮಾಣ ಮಾಡಬೇಕಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಟ್ರಸ್ಟ್‌ನ ಮುಂದಿಟ್ಟಿದ್ದೇನೆ ಎಂದು ತಿಳಿಸಿದರು.
ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಯನ್ನು 40 ಅಡಿ ಆಳದವರೆಗೆ ಮಣ್ಣನ್ನು ತೆರವುಗೊಳಿಸಿ ಪೀಠ ರಚನೆ ಮಾಡಲಾಗಿದೆ. ನಿಗದಿತ ಅವಧಿಯಲ್ಲೇ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
- Advertisement -


