Friday, May 10, 2024
HomeUncategorizedಪೇ-ಸಿಎಂ ಪೋಸ್ಟರ್ ವೈರಲ್ ಪ್ರಕರಣ;  ಐವರು ಆರೋಪಿಗಳ ಬಂಧನ

ಪೇ-ಸಿಎಂ ಪೋಸ್ಟರ್ ವೈರಲ್ ಪ್ರಕರಣ;  ಐವರು ಆರೋಪಿಗಳ ಬಂಧನ

spot_img
- Advertisement -
- Advertisement -

ಬೆಂಗಳೂರು: ಪೇ-ಸಿಎಂ ಪೋಸ್ಟರ್ ವೈರಲ್ ಪ್ರಕರಣ ಸಂಬಂಧಿಸಿದಂತೆ ಇಂದು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪೋಸ್ಟರ್ ವೈರಲ್ ಮಾಡಿದವರಿಗೆ ಬಿಗ್ ಶಾಕ್ ನೀಡಿದ್ದಾರೆ. ಸಂಜಯ್, ಸಿದ್ಧಯ್ಯ, ವಿನೋದ್, ಮದನ್ ಹಾಗೂ ವಿಶ್ವಮೂರ್ತಿ ಬಂಧಿತ ಆರೋಪಿಗಳು.

ಈ ಕುರಿತಂತೆ ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದು, ಪೇ-ಸಿಎಂ ಪೋಸ್ಟರ್ ವೈರಲ್ ಸಂಬಂಧ ನಗರದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

 ಬಂಧಿತ ಆರೋಪಿ ಸಂಜಯ್ ಕೆಪಿಸಿಸಿಯ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ. ಇದೀಗ ಬಂಧನದ ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಪೇ-ಸಿಎಂ ಪೋಸ್ಟರ್ ವೈರಲ್ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

- Advertisement -
spot_img

Latest News

error: Content is protected !!