Wednesday, June 24, 2026
Homeತಾಜಾ ಸುದ್ದಿ7 ಮಂದಿ ಪ್ರಯಾಣಿಕರಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನ

7 ಮಂದಿ ಪ್ರಯಾಣಿಕರಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನ

- Advertisement -
- Advertisement -

ಕೇಂದ್ರ ಅಂಡಮಾನ್ ದ್ವೀಪದ ಉತ್ತರ ಭಾಗದಲ್ಲಿರುವ ಪೋರ್ಟ್ ಬ್ಲೇರ್ ನಿಂದ ಟೇಕಫ್ ಆದ ಕೆಲವೇ ಕ್ಷಣಗಳಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್ ಮಾಯಾಬಂದರ್ ಬಳಿ ಸಮುದ್ರದಲ್ಲಿ ಪತನಗೊಂಡಿರುವ ಬಗ್ಗೆ ವರದಿಯಾಗಿದೆ.

ಏಳು ಮಂದಿ ಪ್ರಯಾಣಿಕರನ್ನು ಹೊಂದಿದ್ದ ಈ ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ 9.30ಕ್ಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮಾಯಾಬಂದರ್ ಬಳಿ ಕೊಂಚ ದೂರದಲ್ಲಿ ಪತನಗೊಂಡಿದೆ.

ನ್ಯಾಷನಲ್ ಚಾಪರ್ ಕ್ಯಾರಿಯರ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಇಬ್ಬರು ಸಿಬ್ಬಂದಿಗಳು ಹಾಗೂ ಐವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪೋರ್ಟ್ ಬ್ಲೇರ್ ನಿಂದ ಹಾರಾಟ ಕೈಗೊಂಡಿತ್ತು ಎಲ್ಲರನ್ನೂ ರಕ್ಷಿಸಲಾಗಿದೆ.

- Advertisement -

Latest News

error: Content is protected !!