Tuesday, June 23, 2026
Homeಅಪರಾಧಪವನ್ ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ಪ್ರಕರಣ: ಎರಡನೇ ಆರೋಪಿ ಉಸ್ಮಾನ್ ಗೆ ಜಾಮೀನು ಮಂಜೂರು

ಪವನ್ ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ಪ್ರಕರಣ: ಎರಡನೇ ಆರೋಪಿ ಉಸ್ಮಾನ್ ಗೆ ಜಾಮೀನು ಮಂಜೂರು

- Advertisement -
- Advertisement -

ಬೆಳ್ತಂಗಡಿ: ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡದ ಕ್ಯಾಂಟಿನ್ ನಲ್ಲಿ ವೇಶ್ಯಾವಾಟಿಕೆ ಪ್ರಕರಣ ಸಂಬಂಧ ಓರ್ವ ಆರೋಪಿಗೆ ಮಂಗಳೂರು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕೆಇಬಿ ರಸ್ತೆಯಲ್ಲಿರುವ ಪವನ್ ಕ್ಯಾಂಟಿನ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದಾಗ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಖಂದರ್ ಪಾಷ ನೇತೃತ್ವದ ಪೊಲೀಸರು ಮೇ.10 ರಂದು ಸಂಜೆ 5 ಗಂಟೆಗೆ ದಾಳಿ ಮಾಡಿ ವೇಶ್ಯಾವಟಿಕೆ ನಡೆಸುತ್ತಿದ್ದ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ(55) ಮತ್ತು ಉಸ್ಮಾನ್(38) ನನ್ನು ಬಂಧಿಸಿ, ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಸುಂದರ್ ಶೆಟ್ಟಿ ಮತ್ತು ಉಸ್ಮಾನ್ ನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಮೇ.11 ರಂದು ಸಂಜೆ ಹಾಜರುಪಡಿಸಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಉಸ್ಮಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ನಡೆಸಿದ ನ್ಯಾಯಾಲಯ ಎರಡನೇ ಆರೋಪಿ ಉಸ್ಮಾನ್ ಗೆ ಮೇ.25 ರಂದು ಜಾಮೀನು ಮಂಜೂರು ಮಾಡಿದೆ. ಉಸ್ಮಾನ್ ಪರ ಬೆಳ್ತಂಗಡಿಯ ವಕೀಲರಾದ ಸೆವಿಯಾರ್ ಪಾಲೇಲಿ ವಾದ ಮಂಡಿಸಿದ್ದಾರೆ.

- Advertisement -

Latest News

error: Content is protected !!