Wednesday, July 2, 2025
Homeಕರಾವಳಿಉದ್ಯಮಿ ಪಾವೂರು ಗುತ್ತು ಶ್ರೀನಿವಾಸ್ ರೈ ನಿಧನ

ಉದ್ಯಮಿ ಪಾವೂರು ಗುತ್ತು ಶ್ರೀನಿವಾಸ್ ರೈ ನಿಧನ

spot_img
- Advertisement -
- Advertisement -

ಮಂಗಳೂರು: ನಗರದ ಹಿರಿಯ ಉದ್ಯಮಿ ಮತ್ತು ಕಾಂಗ್ರೆಸ್ ಧುರೀಣ ಪಾವೂರು ಗುತ್ತು ಶ್ರೀನಿವಾಸ್ ರೈ ಯವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಸ್ವತಂತ್ರ ಹೋರಾಟಗಾರ ಬಿ.ಅನಂತ್ ರೈ ಅವರ ಪುತ್ರ.

ಕೆನರಾ ಟೈಲ್ ವರ್ಕ್ಸ್,ಬೋಳಾರ್ ಇದರ ಮಾಲಕರಾಗಿದ್ದ ಇವರು, ವೆಸ್ಟೆರ್ನ್ ಇಂಡಿಯಾ ಟೈಲ್ ಮೆನುಫೆಕ್ಚರಸ್ರ್ ಅಸೋಸಿಯೇಷನ್ ನ ಕಾರ್ಯದರ್ಶಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದರು . ಕ್ರಿಕೆಟ್ ಪ್ರೇಮಿಯಾಗಿದ್ದ ಇವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರಾಗಿ, ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ನಗರದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು, ಬೋಳೂರಿನ ಹಳೇಕೋಟೆ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮುಕ್ತೇಸರರಾಗಿದ್ದರು. ಮಂಗಳೂರು ನಗರದ ಅಭಿವೃದ್ಧಿಯ ಬಗ್ಗೆ ಬಹಳ ಕಾಳಜಿ ಹೊಂದಿದ್ದರು . ಮೃತರು ಪತ್ನಿ ,ಇಬ್ಬರು ಪುತ್ರರರು ಸೇರಿದಂತೆ ಅಪಾರ ಪ್ರಮಾಣದ ಬಂದು ಬಳಗವನ್ನು ಅಗಲಿದ್ದಾರೆ .

- Advertisement -
spot_img

Latest News

error: Content is protected !!