Thursday, June 4, 2026
Homeಜ್ಯೋತಿಷ್ಯಲಾಕ್‌ಡೌನ್‌ನಲ್ಲಿಯೇ ತಯಾರಾದ ಪರಿವೇಷಣೆ ಕಿರುಚಿತ್ರ: ಚಿತ್ರಪ್ರೇಮಿಗಳಿಂದ ಫುಲ್ ಮಾರ್ಕ್ಸ್

ಲಾಕ್‌ಡೌನ್‌ನಲ್ಲಿಯೇ ತಯಾರಾದ ಪರಿವೇಷಣೆ ಕಿರುಚಿತ್ರ: ಚಿತ್ರಪ್ರೇಮಿಗಳಿಂದ ಫುಲ್ ಮಾರ್ಕ್ಸ್

- Advertisement -
- Advertisement -

ಮೈಸೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಹಲವರ ಅನೇಕ ಯೋಜನೆಗಳು ಕಡಿಮೆಯಾಗಿರಬಹುದು ಆದರೆ, ಇಲ್ಲೊಂದು ಉತ್ಸಾಹಿ ಯುವಕರ ಯೋಜನೆಗಳು ಮಾತ್ರ ಸ್ಥಗಿತಗೊಂಡಿಲ್ಲ. ಈ ಅವಧಿಯಲ್ಲಿ ಯುವಕರ ಬಳಗ ರೈ ಕ್ರಿಯೇಟಿವ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ‘ಪರಿವೇಷಣೆ’ ಎಂಬ ಕನ್ನಡ ಕಿರು ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ.

ದೇವರಾಜ್ ನಿರ್ಮಾಣದಲ್ಲಿ, ಸುಬ್ರಹ್ಮಣ್ಯ ಯು. ಜಿ ಬರೆದು ನಿರ್ದೇಶಿಸಿದ ಈ ಕಿರುಚಿತ್ರ ಯೌಟ್ಯೂಬ್ ನಲ್ಲಿ ಬಿಡುಗಡೆ ಗೊಂಡಿದ್ದು, ಚಿತ್ರರಸಿಕರಿಂದ ಯುವಕರ ಉತ್ತಮ ಪ್ರಯತ್ನಕ್ಕೆ ಶಹಬ್ಬಾಸ್ ಎಂದಿದ್ದಾರೆ.

.ಈ ಕಿರುಚಿತ್ರ ಮದ್ಯಮ ವರ್ಗದ ಒಬ್ಬ ಸಾಮಾನ್ಯ ನಟನ ಜೀವನದ ಕಷ್ಟಗಳು ಹೇಗಿರುತ್ತದೆ ಎಂದು ಸುಂದರವಾಗಿ ತೋರಿಸಿದ್ದಾರೆ. ರಘು ಉಬರ್ ಕ್ಯಾಮೆರಾದ ಹಿಂದೆ ಶ್ರಮಿಸಿದ್ದು, ಹಾಗೂ ಸಂಗೀತ ಸಂಯೋಜನೆಯಲ್ಲಿ ಹೇಮಂತ್ ಹೆಗಡೆ ತಮ್ಮ ಕೈಚಳಕ ತೋರಿದ್ದಾರೆ.

ಕ್ರಿಯೇಟಿವ್ ಸ್ಟಾರ್ ಖ್ಯಾತಿಯ ದರ್ಶನ್ ರೈ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು , ಮಹದೇವ್ ಪ್ರಸಾದ್, ಸಂದೀಪ್, ದರ್ಶನ್ ಶೈವ ಮತ್ತು ಕಾರ್ತಿಕ್ ಸಹಕರಿಸಿದ್ದಾರೆ.

- Advertisement -

Latest News

error: Content is protected !!